ದಾವಣಗೆರೆ: ನನ್ನ ಸಹೋದರ ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ನಾಪತ್ತೆ ಆಗಿದ್ದು, ಇದೊಂದು ಪೂರ್ವ ನಿಯೋಜಿತ ಕಿಡ್ನ್ಯಾಪ್. ಈವರೆಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದಿರುವುದು ಬೇಸರ ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ , ಹೊನ್ನಾಳಿ ಶಾಎಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯ ಮಾತನಾಡಿದ ಅವರು, ಚಂದ್ರು ಸುರಕ್ಷಿತವಾಗಿ ಮರಳಬೇಕು ಎಂಬುದು ಕುಟುಂಬದವರ ಆಸೆ. ಆತನಿಗಾಗಿ ಯಾವುದೇ ತ್ಯಾಗಕ್ಕಾದರೂ ಸಿದ್ಧನಿದ್ದೇನೆ. ಮನೆಯಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ. ಯಾರೂ ಸರಿಯಾಗಿ ನಿದ್ದೆ, ಊಟ ಮಾಡುತ್ತಿಲ್ಲ. ಚಂದ್ರುಗೆ ಏನಾಗಿದೆಯೋ ಎಂಬ ಭಯದಲ್ಲಿ ಬದುಕುತ್ತಿದ್ದೇವೆ ಎಂದರು.
ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಶಿವಮೊಗ್ಗದಿಂದ ಕಾರು ಹೋಗಿರುವ ದೃಶ್ಯವಿದೆ. ಆದರೆ ಕಾರನ್ನು ಆತನೇ ಚಲಾಯಿಸುತ್ತಿದ್ದಾನೆಯೇ ಅಥವಾ ಬೇರೆಯವರು ಚಲಾಯಿಸಿದ್ದಾರೋ ಗೊತ್ತಿಲ್ಲ. ಅವರ ಕಾರ ಹಿಂದೆ ಮತ್ತೊಂದು ಕಾರುವ ಫಾಲೋ ಮಾಡಿಕೊಂಡು ಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಪೂರ್ವ ನಿಯೋಜಿತ ಕಿಡ್ನ್ಯಾಪ್ ರೀತಿ ಕಾಣಿಸುತ್ತದೆ ಎಂದಿದ್ದಾರೆ.
ರೇಣುಕಾಚಾರ್ಯ ಮನೆಗೆ ದಾವಣಗೆರೆ ಎಸ್ ಪಿ ಸಿ.ಬಿ. ರಿಷ್ಯಂತ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹೊನ್ನಾಳಿ – ನ್ಯಾಮತಿ ಕ್ಷೇತ್ರ ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಿಂದಲೂ ಫೋನ್ ಮಾಡಿ ಸಮಾಧಾನ, ಧೈರ್ಯ ತುಂಬುತ್ತಿದ್ದಾರೆ. ಅವರಿಗೆಲ್ಲರಿಗೂ ನಾನು ಚಿರರುಣಿ ಆಗಿರುತ್ತೇನೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ಈ ಹಿಂದೆ ಹೊನ್ನಾಳಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ದೇವರಾಜ್ ಅವರನ್ನು ವಿಶೇಷಾಧಿಕಾರಿ ಆಗಿ ನೇಮಕ ಮಾಡಲಾಗಿದೆ. ಈಗ ಉಡುಪಿಯ ಮಣಿಪಾಲದಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



