ದಾವಣಗೆರೆ:ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ. 83 ಸಾವಿರ ಮೌಲ್ಯದ 22 ಗ್ರಾಂ ಚಿನ್ನ ಮತ್ತು 15 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿತ್ರದುರ್ಗ ಟೌನ್ ನ ಆರೋಪಿಗಳಾದ ಜಿತೇಂದ್ರ (36) , 2) ಮಹಾಲಿಂಗಪ್ಪ (48) ಬಂಧಿಸಲಾಗಿದೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಸಂತೋಷ್ ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ವೃತ್ತದ ಮಹೇಶ್ ನೇತೃತ್ವದಲ್ಲಿ ಪಿ.ಎಸ್.ಐ ಶಿವರುದ್ರಪ್ಪ.ಎಸ್.ಮೇಟಿ, ಪಿಎಸ್‌ಐ ಮಂಜುನಾಥ ಎಸ್ ಕಲ್ಲೇದೇವರ ಹಾಗೂ ಸಿಬ್ಬಂದಿಗಳಾದ ಮೈಲಾರಪ್ಪ, ಎಎಸ್‌ಐ, ಉಮೇಶ ವಿಟ ಮಂಜುನಾಥ, ದೊಡ್ಡೆಶ್, ಕೊಟ್ರೇಶ್, ಆಂಜನೇಯ, ಪ್ರಹ್ಲಾದ್ ಎಸ್ , ಸೋಮಶೇಖರ , ರಾಘವೇಂದ್ರ, ಶಾಂತರಾಜು, ನಾಗರಾಜ್ ಕುಂಬಾರ, ಅಕ್ತರ್ ಎಸ್.ಎಂ. ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ.
ಈ ಮೇಲ್ಕಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಎಸ್ ಪಿ ಸಿ.ಬಿ. ರಿಷ್ಯಂತ್ , ಹೆಚ್ಚುವರಿ ಎಸ್ ಪಿ ರಾಮಗೊಂಡ ಬಿ ಬಸರಗಿ ಶ್ಲಾಘಿಸಿದ್ದಾರೆ.



