ದಾವಣಗೆರೆ; ಪಿಬಿ ರಸ್ತೆಯಲ್ಲಿರುವ ರವಿ ಮಿಲ್ ಆವರಣದಲ್ಲಿರುವ ರವೀಂದ್ರ ಎಂಟರ್ ಪ್ರೈಸಸ್ ಗೋಡೌನ್ ನಲ್ಲಿದ್ದ 4.20 ಲಕ್ಷ ಮೌಲ್ಯದ ಹಲ್ದಿರಾಮ್ಸ್ ಫುಡ್ ಪ್ರೊಡೆಕ್ಟ್ ಗಳನ್ನು ಕಳವು ಮಾಡಿದ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರವೀಂದ್ರ ಎಂಟರ್ ಪ್ರೈಸಸ್ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಪ್ರಜ್ವಲ್ (22), ದೇವರಾಜ್ (30), ಸಂಗಮೇಶ್ (23) ಹಾಗೂ ಕದ್ದ ಮಾಲನ್ನು ಮಾರಾಟ ಮಾಡಲು ಸಹಾಯ ಮಾಡಿದ ಜೈಸನ್ (21) ಮತ್ತು ಶರಣಪ್ಪ ಇಕ್ಕಳಿಕಿ (38) ಬಂಧಿಸಲಾಗಿದೆ. ಆರೋಪಿಗಳಿಂದ 4.20 ಲಕ್ಷ ಮೌಲ್ಯದ ಹಲ್ದಿರಾಮ್ಸ್ ಫುಡ್ ಪ್ರೊಡೆಕ್ಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಆರ್ ಎಂಸಿ ಯಾರ್ಡ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.



