ದಾವಣಗೆರೆ: ಸಿಇಟಿಯಲ್ಲಿ ಪರೀಕ್ಷೆಯಲ್ಲಿ ಕಡಿಮೆ ರ‍್ಯಾಂಕ್ ಬಂದಿದ್ದು, ಮೆಡಿಕಲ್ ಸೀಟ್ ಕೈತಪ್ಪಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಮುಸ್ಲಿಂ ಕಾಲೋನಿಯಲ್ಲಿ ಚೈತ್ರಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಪಿಯುಸಿ ಮುಗಿಸಿದ ಬಳಿಕ ಸಿಇಟಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿದ್ದಳು. ಆದರೆ ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್ ಬಂದಿದ್ದರಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು.
ಮೆಡಿಕಲ್ ಓದಬೇಕು ಎಂದು ಚೈತ್ರಾ ಆಸೆ ಆಗಿತ್ತು. ಆದರೆ, ಕಡಿಮೆ ರ‍್ಯಾಂಕ್ ಬಂದಿದ್ದರಿಂದ ಮೆಡಿಕಲ್ ಸೀಟು ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



