ದಾವಣಗೆರೆ: ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಪಂಪ್ಸೆಟ್ ಆನ್ ಮಾಡಲು ಹೋದ ಯುವಕನಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟರ ಗ್ರಾಮದ ಬಳಿ ಜಮೀನಿನಲ್ಲಿ ನಡೆದಿದೆ.
ನಾಗರಾಜ (30) ಸಾವನಪ್ಪಿದ ಯುವಕನಾಗಿದ್ದಾನೆ. ಮೃತ ನಾಗರಾಜ್ , ತಮ್ಮ ಜಮೀನಿನಲ್ಲಿ ಹಾಕಿರುವ ಶೇಂಗಾ, ಅಡಿಕೆ ಬೆಳೆಗಳಿಗೆ ನೀರು ಬಿಡಲು ಹೋಗಿದ್ದಾಗ ಅವಘಡ ಜರುಗಿದೆ. ಘಟನಾ ಸ್ಥಳಕ್ಕೆ ಜಗಳೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.