ದಾವಣಗೆರೆ: ಗ್ರೇಂಡರ್ ಗೇ ಆ್ಯಪ್ ಮೂಲಕ ವಂಚಿಸಿ, ದರೋಡೆ ಮಾಡುತ್ತಿದ್ದ ಐವರು ಆರೋಪಿ ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ್ದ ಕೆಆರ್ ಎಸ್ ಪಕ್ಷದ ಯುವ ಮುಖಂಡ ಮಾಲತೇಶ ಎಂಬತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಗ್ರೇಂಡರ್ ಗೇ ಆ್ಯಪ್ ಮೂಲಕ ವ್ಯಕ್ತಿಯೊಬ್ಬನನ್ನು ಪರಿಚಯಿಸಿಕೊಂಡು ಕುಂದುವಾಡದ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು 5-6 ಜನ ಸೇರಿ ಹಲ್ಲೆ ಮಾಡಿ ಮೊಬೈಲ್, 25 ಗ್ರಾಂ ತೂಕದ ಬಂಗಾರದ ಸರ ಮತ್ತು 2 ಸಾವಿರ ಹಣ ಕಿತ್ತುಕೊಂಡಿದ್ದರು.ಅಲ್ಲದೆ ಎಟಿಎಂ ಕಾರ್ಡ್ ಮತ್ತು ಪಾಸ್ ವರ್ಡ್ ಪಡೆದುಕೊಂಡು 16 ಸಾವಿರ ರೂಪಾಯಿ ವಿತ್ ಡ್ರಾ ಮಾಡಿಕೊಂಡಿದ್ದರು ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿತ ಗ್ಯಾಂಗ್‌ನ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಹಾಗೂ ದರೋಡೆ ಗ್ಯಾಂಗಿನ ಸದಸ್ಯರಿಗೆ ಆಶ್ರಯ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಕೆಆರ್ ಎಸ್ ಪಕ್ಷದ ದಾವಣಗೆರೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಾಲತೇಶ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಮಾಡಿದ್ದ ಮೊಬೈಲ್, ದರೋಡೆ ಮಾಡಲು ಬಳಸಿದ್ದ 2 ಮೊಬೈಲ್, ಆಟೋ ರಿಕ್ಷಾ ವಶಕ್ಕೆ ಪಡೆದುಕೊಳ್ಳ ಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿತರ ಪತ್ತೆ ಕಾರ್ಯ ಮಡೆಯುತ್ತಿದೆ.



