ದಾವಣಗೆರೆ: ನಗರದ ಎಸ್.ಎಸ್ ಆಸ್ಪತ್ರೆಯಿಂದ ಶ್ರೀರಾಮನಗರಕ್ಕೆ ಹೋಗುವ ಮಾರ್ಗ ಮದ್ಯದ ಸಿದ್ದಗಂಗಾ ಬಡಾವಣೆಯ ಹತ್ತಿರ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನುಬ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ) ಹೊಸಪೇಟೆ ವಿಭಾಗ ನಿರ್ದೇಶನದ ಮೇರೆಗೆ ಆ.18 ರಂದು ದಾವಣಗೆರೆ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಸ್.ಆರ್ ಮುರುಡೇಶ್ ನೇತೃತ್ವದಲ್ಲಿ, ದಾವಣಗೆರೆ ವಲಯ ಅಬಕಾರಿ ಉಪ ನಿರೀಕ್ಷಕರ-2 ಶ್ರೀಕಾಂತ್ ಧರಣಿ, ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆಯಲಾಗಿದೆ.
ಸಂಜೆ.04 ಗಂಟೆಗೆ ನಗರದ ಎಸ್.ಎಸ್ ಆಸ್ಪತ್ರೆಯಿಂದ ಶ್ರೀರಾಮನಗರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಸಿದ್ದಗಂಗಾ ಬಡಾವಣೆಯ ಹತ್ತಿರ ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಹೊಂದಿ ಮಾರಾಟ ಮಾಡುವಾಗ ಅಬಕಾರಿ ದಾಳಿ ನಡೆಸಿದಾಗ ಆರೋಪಿ ಪ್ರಜ್ವಲ್ ಕೆ.ವಿ ವ್ಯಕ್ತಿಯನ್ನು ಬಂಧಿಸಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಅಂದಾಜು ರೂ. 15,000 ಮೌಲ್ಯದ 189 ಗ್ರಾಂ ಹೂವು, ಬೀಜ, ಕಡ್ಡಿ ಮಿಶ್ರಿತವಾದ ಒಣ ಗಾಂಜಾವನ್ನು ಇಲಾಖಾ ವಶಕ್ಕೆ ಪಡೆಯಲಾಗಿದೆ. ರೂ.30,000 ಮೌಲ್ಯದ ವಾಹನ ಸೇರಿ ಒಟ್ಟು ಅಂದಾಜು ರೂ.45,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.



