ದಾವಣಗೆರೆ: ತಾಲ್ಲೂಕಿನ ಲೋಕಿಕೆರೆ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ರಾತ್ರೋರಾತ್ರಿ ಹಸಿ ಅಡಿಕೆ ಕಳವು ಮಾಡಿದ ಘಟನೆ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನ ಎಂಬುವರ ಜಮೀನಿನಲ್ಲಿ ಫಸಲಿಗೆ ಬಂದಿದ್ದ 4 ಕ್ವಿಂಟಲ್ ಹಸಿ ಅಡಿಕೆಯನ್ನು ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಮಲ್ಲಿಕಾರ್ಜುನ ಅವರು ಬೆಳಿಗ್ಗೆ ಅಡಿಕೆ ತೋಟಕ್ಕೆ ಬಂದು ನೋಡಿದಾಗ ಅಡಿಕೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಬಗ್ಗೆ ಹದಡಿಠಾಣೆಯಲ್ಲಿ ದೂರು ನೀಡಿದ್ದಾರೆ.