Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ತೋಟಗಳಲ್ಲಿ ಹರಳು ಉದುರುವಿಕೆ ನಿಯಂತ್ರಣಕ್ಕೆ ಈ ಕ್ರಮ ಅನುಸರಿಸಿ

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆ ತೋಟಗಳಲ್ಲಿ ಹರಳು ಉದುರುವಿಕೆ ನಿಯಂತ್ರಣಕ್ಕೆ ಈ ಕ್ರಮ ಅನುಸರಿಸಿ

ದಾವಣಗೆರೆ: ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿಂದ ಉತ್ತಮ ಮಳೆಯಾಗಿದ್ದು, ಕೆಲವು ಅಡಿಕೆ ತೋಟಗಳಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ತೋಟಗಳಲ್ಲಿ ಶೀತದ ವಾತಾವರಣ ಹಾಗೂ ಹರಳು ಉದುರುವ ಬಾಧೆ ಕಂಡು ಬಂದಿದೆ. ಇದರ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಕೆಳಕಂಡ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ.

ನೀರು ಬಸಿಯದ ತೋಟಗಳಲ್ಲಿ ಬಸಿಗಾಲುವೆಗಳನ್ನು ಮಾಡುವುದು. ತೋಟದ ಸುತ್ತಲೂ ಇರುವ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸುವುದು. ತೋಟದಲ್ಲಿ ಅಲ್ಲಿ ಇಲ್ಲಿ ನೀರು ನಿಂತಿದ್ದರೆ ಅದನ್ನು ಹೊರಗೆ ಹಾಕಲು ಕಾಲುವೆಗಳನ್ನು ನಿರ್ಮಿಸಬೇಕು. ಸಣ್ಣ ಗಿಡಗಳಲ್ಲಿ ನೀರು ನಿಂತಿದ್ದರೆ ಅಂತಹ ತೋಟಗಳಿಗೆ ಲಘು ಫೋಷಕಾಂಶದ ಮಿಶ್ರಣ ಐದು ಗ್ರಾಂ ಪ್ರತಿ ಲೀಟರ್ ನೀರಿನ ಜೊತೆಗೆ, ಕಾರ್ಬನ್ ಡ್ರೈಜಿಯಮ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಡಿಕೆ ಗಿಡದ ಎಲೆಗಳು ಹಳದಿ ಬಣಕ್ಕೆ ತಿರುಗಿದರೆ, ಕ್ಯಾಲ್ಸಿಯಂ ನೈಟ್ರೇಟ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ವಾತಾವರಣ ಬದಲಾವಣೆಯಿಂದಾಗಿ ಸಣ್ಣ ಗಿಡಗಳ ಎಲೆಗಳ ತಳಭಾಗದಲ್ಲಿ ರಸಹೀರುವ ಕೆಂಪು ತಿಗಣೆ ಹಾವಳಿಯಿಂದಾಗಿ ಕೆಳಭಾಗದ ಎಲೆಗಳು ಒಣಗುವ ಸಾಧ್ಯತೆ ಕಂಡು ಬಂದರೆ ಗಿಡಗಳಿಗೆ Propargite ಅಥವಾ Ethion ಕೀಟ ನಾಶಕವನ್ನು 2 ಮಿಲಿ ಮತ್ತು ನೀರಿನಲ್ಲಿ ಕರಗುವ 19:19:19 ಪೋಷಕಾಂಶವನ್ನು 4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಈರುಳ್ಳಿ ಬೆಳೆಯು ಅತಿ ಹೆಚ್ಚು ಮಳೆಯ ಬಾಧೆಗೆ ಸಿಲುಕಿದೆ. ಈ ಭಾಗದ ರೈತರು ಈರುಳ್ಳಿ, ಬೆಳೆಗೆ ಲಘು ಪೋಷಕಾಂಶದ ಮಿಶ್ರಣ 4 ಗ್ರಾಂ ಮತ್ತು ಹೆಕ್ಸ ಕೊನೊಜೋಲ್ (Hexaconazol Cantaf ಒಂದು ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಒಂದು ವಾರದ ನಂತರ ನೀರಿನಲ್ಲಿ ಕರಗುವ ಪೆÇಟ್ಯಾμï (SOP) ಅನ್ನು 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬಾಳೆ ಬೆಳೆಯಲ್ಲಿ ಅತಿ ಹೆಚ್ಚು ನೀರು ನಿಂತ ಸಂದರ್ಭದಲ್ಲಿ ಪನಾಮ ಸೊರಗು ರೋಗ ಬರುವ ಎಲ್ಲಾ ಸಂಭವವಿದೆ.

ಇದರ ನಿಯಂತ್ರಣಕ್ಕಾಗಿ ಸಾಫ್ ((SAAF: Carbendazim 12% + Mancozeb 63% ) ಎರಡು ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಪ್ರತಿ ಗಿಡದ ಬುಡಕ್ಕೆ ಎರಡು ಲೀಟರಿನಂತೆ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆಗೆ ಹಾಗೂ ತರಳುಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top