ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಸಂಕ್ಲಿಪುರದ ಮನೆಯೊಂದರಲ್ಲಿ ಪೇಂಟಿಂಗ್ ಮಾಡುವಾಗ ವೇಳೆ ವಿದ್ಯುತ್ ಸ್ಪರ್ಶಿಸಿ ತ್ಯಾವಣಗಿ ಗ್ರಾಮದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಸಾಗರ್ ಟಿ.ಎ.(18) ಮೃತ ವಿದ್ಯಾರ್ಥಿಯಾಗಿದ್ದಾನೆ. ತ್ಯಾವಣಗಿಯ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾದ ಈತ ಗ್ರಾಮದ ಅಣ್ಣಪ್ಪ ಹಾಗೂ ಅನಸೂಯಮ್ಮ ದಂಪತಿಯ ಪುತ್ರನಾಗಿದ್ದಾಬೆ.ಭಾನುವಾರ ರಜೆ ಇದ್ದುದರಿಂದ ಸಂಕ್ಲಿಪುರ ಗ್ರಾಮಕ್ಕೆ ತೆರಳಿ ಮನೆಗೆ ಬಣ್ಣ ಮಾಡುವ ಕೆಲಸಕ್ಕೆ ಹೋಗಿದ್ದನು.
ಮನೆಯ ಮೇಲಿನ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಗಾಯಗೊಂಡ ರಾಮಪ್ಪ ಅವರ ಸ್ಥಿತಿ ಗಂಭೀರವಾಗಿದೆ.ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



