ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೊರ ವಲಯದಲ್ಲಿ 5 ವಾಹನಗಳಲ್ಲಿ ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮೇಲೆ ಪೊಲೀಸರ ದಾಳಿ ಮಾಡಿ, 19 ಜಾನುವಾರು ಸಹಿತ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಸಂತೇಬೆನ್ನೂರಿನ ಚೌಡೇಶ್ವರಿ ದೇವಸ್ಥಾನದ ಸಾಸಲು ರಸ್ತೆ ಬಳಿ 5 ವಾಹನಗಳಲ್ಲಿ ಅಕ್ರಮವಾಗಿ 19 ಜಾನುವಾರು ಸಾಗಾಟದ ಮಾಹಿತಿ ಮೇರೆ ಪೊಲೀಸರು ದಾಳಿ ಮಾಡಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು. 15 ಎಮ್ಮೆ, 3 ಹಸು ಕರು ಹಾಗೂ 1 ಹಸುವನ್ನು ವಶಕ್ಕೆ ಪಡೆದು, 6 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 14.23 ಲಕ್ಷ ಮೌಲ್ಯದ 5 ವಾಹನ ಹಾಗೂ ಜಾನುವಾರು ವಶಕ್ಕೆ ಪಡೆಯಲಾಗಿದೆ. ಈ ಸಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ ಪಿ ಸಂತೋಷ್ ಮಾರ್ಗದರ್ಶನದಲ್ಲಿ , ಸಿಪಿಐ ಮಹೇಶ್ ನೇತೃತ್ವದಲ್ಲಿ ಪಿಎಸ್ ಐ ಶಿವರುದ್ರಪ್ಪ ಎಸ್. ಮೇಟಿ ಅವರನ್ನೊಳಗೊಂಡ ತಂಡ ದಾಳಿ ಮಾಡಿದೆ.



