ದಾವಣಗೆರೆ: ಮನೆಯ ತಾರಸಿ ಮೇಲೆ ಗಾಂಜಾ ಬೆಳೆದ ಆರೋಪಿ ಅಬಕಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಎಸ್ ರಮೇಶ್ (40) ಎಂಬುವನ ಮನೆ ಮೇಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ ನೇತ್ರತ್ವದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ಮನೆಯ ಮೇಲೆ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಆರೋಪಿ ಎಸ್ ರಮೇಶ್ನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಆರ್ ಸಿಸಿ ಮನೆಯ ಮೇಲೆ ಕುಂಡದಲ್ಲಿ ಗಾಂಜಾ ಬೆಳೆದಿದ್ದನು. ಅಬಕಾರಿ ಅಧಿಕಾರಿಗಳು 30ಕ್ಕೂ ಹೆಚ್ಚು ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ.