ದಾವಣಗೆರೆ: ನಗರದಲ್ಲಿ ಆಯೋಹಿಸಿದ್ದ ವಿಶ್ವಕರ್ಮ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಯುವತಿ ಆಟೋದಲ್ಲಿ ಬಿಟ್ಟು ಹೋದ ಲ್ಯಾಪ್ ಟಾಪ್, ಮೊಬೈಲ್ ಹಾಗೂ ಬಟ್ಟೆ ಇದ್ದ ಬ್ಯಾಗ್ ಅನ್ನು ಜಿಲ್ಲಾ ಪೊಲೀಸರು ಹಾಗೂ ಸ್ಮಾರ್ಟ್ ಸಿಟಿ ಕಮಾಂಡೋ ಸೆಂಟರ್ ಸಿಬ್ಬಂದಿ ಸಿಸಿ ಕ್ಯಾಮರಾ ಮೂಲಕ ಆಟೋ ಪತ್ತೆ ಮಾಡಿ ಬ್ಯಾಗ್ ವಾಪಸ್ ಕೊಡಿಸಿದ್ದಾರೆ.
ಗದಗ ಜಿಲ್ಲೆಯ ಗಾಯತ್ರಿ ಬಿ ಪತ್ತಾರ್ ಅವರು ಬಾಪೂಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ದಾವಣಗೆರೆಗೆ ಬಂದಿದ್ದರು. ರೈಲ್ವೆ ನಿಲ್ದಾಣದಿಂದ ಬಾಪೂಜಿ ಸಮುದಾಯ ಭವನಕ್ಕೆ ಆಟೋ ಮೂಲಕ ಹೋಗುವಾಗ ಆಟೋದಲ್ಲಿಯೇ ಲ್ಯಾಪ್ ಟಾಪ್ , ಮೊಬೈಲ್ ಹಾಗೂ ಬಟ್ಟೆ ಹೊಂದಿದ್ದ ಬ್ಯಾಗ್ ಬಿಟ್ಟು ಹೋಗಿದ್ದರು.
ಕೂಡಲೇ ಅವರು ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಪೊಲೀಸ್ ಸಿಬ್ಬಂದಿ ದಾವಣಗೆರೆ ಸಾರ್ಟ್ ಸಿಟಿ ಕಮಾಂಡೋ ಸೆಂಟರ್ ಸಿಬ್ಬಂದಿ ಮೂಲಕ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಬ್ಯಾಗ್ ಪತ್ತೆ ಮಾಡಿದ್ದಾರೆ. ಆಟೋದಲ್ಲಿ ಸಿಕ್ಕ ಬ್ಯಾಗ್ ಅನ್ನು ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ, ವೃತ್ತ ನಿರೀಕ್ಷಕ ಅನಿಲ್ ಅವರು ಗಾಯತ್ರಿ ಬಿ ಪತ್ತಾರ್ ಅವರಿಗೆ ಹಿಂತಿರುಗಿಸಿದ್ದಾರೆ.