Connect with us

Dvgsuddi Kannada | online news portal | Kannada news online

ಉತ್ತರ ಪ್ರದೇಶದಿಂದ ಬ್ಯಾಂಕ್ ದರೋಡೆಗೆ ಬಂದಿದ್ದರನ್ನು ಸಿನಿಮಾ ಸ್ಟೈಲ್ ನಲ್ಲಿ ಚೇಜ್ ಮಾಡಿ ಗುಂಡು ಹಾರಿಸಿ ಸೆರೆಹಿಡಿದ ದಾವಣಗೆರೆ ಪೊಲೀಸರು…!!

ಪ್ರಮುಖ ಸುದ್ದಿ

ಉತ್ತರ ಪ್ರದೇಶದಿಂದ ಬ್ಯಾಂಕ್ ದರೋಡೆಗೆ ಬಂದಿದ್ದರನ್ನು ಸಿನಿಮಾ ಸ್ಟೈಲ್ ನಲ್ಲಿ ಚೇಜ್ ಮಾಡಿ ಗುಂಡು ಹಾರಿಸಿ ಸೆರೆಹಿಡಿದ ದಾವಣಗೆರೆ ಪೊಲೀಸರು…!!

ದಾವಣಗೆರೆ: ಉತ್ತರ ಪ್ರದೇಶದಿಂದ ಬ್ಯಾಂಕ್‌ ದರೋಡೆಗೆ (bank robbery) ಬಂದಿದ್ದ ದರೋಡೆಕೋರರ ತಂಡವನ್ನು ಅಡ್ಡಗಟ್ಟಿ ಸಿನಿಮಾ ಸ್ಟೈಲ್ ನಲ್ಲಿ ಚೇಜಿಂಗ್ ಮಾಡಿದ ದಾವಣಗೆರೆ ಪೊಲೀಸರು, ಗುಂಡು ಹಾರಿಸಿ(Fired) ನಾಲ್ವರನ್ನು ಸೆರೆ (aresarrested) ಹಿಡಿದಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಬಂದಿದ್ದವರನ್ನು ಜಿಲ್ಲಾ ಪೊಲೀಸರು ಖೆಡ್ಡಕ್ಕೆ ಬೀಳಿಸಿದ್ದಾರೆ. ಜಿಲ್ಲೆಯ ನ್ಯಾಮತಿಯಲ್ಲಿ ಇತ್ತೀಚೆಗೆ 13 ಕೋಟಿ ಮೌಲ್ಯದ ಚಿನ್ನಾಭರಣ ಕಳವು ನಡೆದಿತ್ತು. ಈಗ ಮತ್ತೊಂದು ಬ್ಯಾಂಕ್ ದರೋಡೆಗೆ ಬಂದವರು ಸೆರೆ ಸಿಕ್ಕಿದ್ದಾರೆ. ಒಬ್ಬ ದರೋಡೆಕೋರ ಗುಂಡೇಟಿನಿಂದ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೊನ್ನಾಳಿ ತಾಲೂಕಿನ ಅರಬಘಟ್ಟದಲ್ಲಿ ಇಂದು ಮುಂಜಾನೆ 1.30ರ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹೊನ್ನಾಳಿ (Honnali) ತಾಲೂಕಿನ ಅರಬಘಟ್ಟ ಗ್ರಾಮದ ಕ್ರಾಸ್ ಬಳಿ, ಇಂದು (ಮಾ.16) ಬೆಳಗ್ಗೆ 1 ಸುಮಾರಿಗೆ UP 24, U1365 ERTIGA ಮತ್ತು MAHENDRA UP16, AS 5712 ವಾಹನದಲ್ಲಿ ಬಂದಿದ್ದ ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ (Police Firing ) ಮಾಡಿದ್ದಾರೆ.

ಹೊನ್ನಾಳಿ ಠಾಣೆಯ ಪೊಲೀಸರು ಕಡದಕಟ್ಟೆ ಚೆಕ್ ಪೋಸ್ಟ್ ಬಳಿ ನಸುಕಿನ ಜಾವ ವಾಹನಗಳ ತಪಾಸಣೆ ನಡೆಸುತ್ತಿದ್ದರು . ಅದೇ ಸಮಯಕ್ಕೆ ಉತ್ತರ ಪ್ರದೇಶ ರಾಜ್ಯದ ನಂಬರ್ ಪ್ಲೇಟ್ ಇರುವ ಎರಡು ಕಾರುಗಳು ಬರುತ್ತಿದ್ದು ಅವುಗಳನ್ನು ತಡೆಯಲು ಪೊಲೀಸರು ಮುಂದಾದರು.ಆದರೆ, ದರೋಡೆಕೋರರು ಕಾರು ನಿಲ್ಲಿಸದೆ ಹೋಗಿದ್ದಾರೆ. ಕಾರುಗಳನ್ನು ಬೆನ್ನಟ್ಟಿದ ಪೊಲೀಸರು ಎರಡು ಕಾರ್ ಗಳಲ್ಲಿದ್ದ ಏಳು ಜನ ದರೋಡೆಕೋರರನ್ನು ಹಿಡಿಲು ಪ್ರಯತ್ನ ಮಾಡಿದ್ದು, ನ್ಯಾಮತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ನೇತೃತ್ವದ ತಂಡ ಅರಬಘಟ್ಟ ಬಳಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿದೆ. ಆದರೂ, ಕಾರು ನಿಲ್ಲಿಸದ ದರೋಡೆಕೋರರು ಡಿಕ್ಕಿ ಹೊಡೆದು, ವಾಹನದಿಂದ ಇಳಿದು ಓಡಿ ಹೋಗಲು ಯತ್ನಿಸಿದ್ದಾರೆ. ನಿಲ್ಲುವಂತೆ ಸೂಚನೆ ನೀಡಿ ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರಿಸಿದರೂ ಕೂಡ, ಓರ್ವ ದರೋಡೆಕೋರ ನ್ಯಾಮತಿ ಠಾಣೆಯ ಕಾನ್​ಸ್ಟೇಬಲ್ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿನಿದ್ದಾನೆ. ಕೂಡಲೇ ಇನ್ಸ್ಪೆಕ್ಟರ್ ರವಿ ದರೋಡೆಕೋರ ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಫೈರಿಂಗ್ ಮಾಡಿ, ಬಂಧಿಸಿದ್ದಾರೆ.

ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸಾಂ ಯಾನೆ ಟನ್ ಟನ್, ಕಮರುದ್ದೀನ್‌ ಯಾನೆ ಬಾಬು ಸೆರಲಿಯನ್ನು ಬಂಧಿಸಿದ್ದಾರೆ. ಗ್ಯಾಂಗ್​ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎಸ್​ಪಿ ನಾಲ್ಕು ತಂಡ ರಚನೆ ಮಾಡಿದ್ದು, ಪೈರಿಂಗ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮಚ್ಚು, ಬುಲೆಟ್, ಎರಡು ಕಾರುಗಳು ಮತ್ತು ಮಂಕಿ ಕ್ಯಾಪ್ ಸಿಕ್ಕಿವೆ.

ಉತ್ತರ ಪ್ರದೇಶದ ಕಕ್ರಾಳ್ ಗ್ಯಾಂಗ್ ಎಂದು ತಿಳಿದು ಬಂದಿದ್ದು, ಇವರು ಸವಳಂಗದ ಬ್ಯಾಂಕ್ ದರೋಡೆಗೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್​ಬಿಐ ಬ್ಯಾಂಕ್​ ದರೋಡೆಗೂ, ಇವರಿಗೂ ಸಂಬಂಧ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಲ್ಲೆಗೊಳಗಾದ ಪೊಲೀಸ್ ಕಾನ್ಸ್ಟೇಬಲ್ ಆನಂದ್ ಅವರನ್ನು ನ್ಯಾಮತಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿಲಾಗಿದೆ. ಗುಂಡು ತಗುಲಿದ ದರೋಡೆಕೋರನಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇನ್ನುಳಿದ ದರೋಡೆಕೋರರ ಶೋಧ ನಡೆಯುತ್ತಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top