ದಾವಣಗೆರೆ: ಪ್ರೊಡಕ್ಟ್ ಖರೀದಿಸಿದರೆ ಕಮಿಷನ್ ಬರುತ್ತೆಂದು ನಂಬಿ ನಗರದ ಆವರಗೆರೆಯ ವಿದ್ಯಾರ್ಥಿನಿ 2.29 ಲಕ್ಷ ಕಳೆದುಕೊಂಡಿದ್ದಾರೆ.
ಆವರೆಗೆಯ ಪೊಲೀಸ್ ಲೇಔಟ್ ನಿವಾಸಿಯಾದ ಸಹನಾ ಹಣ ಕಳೆದುಕೊಂಡ ವಿದ್ಯಾರ್ಥಿಯಾಗಿದ್ದಾಳೆ. ನಿಮ್ಮನ್ನು ಆನ್‌ಲೈನ್ ಪಾರ್ಟ್ ಟೈಮ್ ಹುದ್ದೆಗೆ ಆಯ್ಕೆ ಮಾಡಿದ್ದು, ಮನೆಯಲ್ಲೇ ಕೆಲಸ ಮಾಡಿ ದಿನಕ್ಕೆ 8 ಸಾವಿರ ಗಳಿಸಬಹುದು ಎಂದು ಅಪರಿಚಿತ ವ್ಯಕ್ತಿ, ಟೆಲಿಗ್ರಾಂ ಆಯಪ್‌ನಲ್ಲಿ ವಿವಿಧ ಪ್ರಾಡೆಕ್ಟ್‌ಗಳ ಚಿತ್ರಗಳನ್ನು ಕಳುಹಿಸಿದ್ದಾನೆ. ಇವುಗಳನ್ನು ಖರೀದಿಸಿದರೆ ಕಮೀಷನ್ ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಸಹನಾ ಅವರು ಆರಂಭದಲ್ಲಿ 100 ಅನ್ನು ಕಳುಹಿಸಿದ್ದಾರೆ. ಆ ವೇಳೆ ಅವರಿಗೆ 350 ಕಮೀಷನ್ ಬಂದಿದೆ. ಶಾಪಿಫೈ ಕಂಪನಿಯ ಪ್ರೊಡಕ್ಟ್ ಖರೀದಿಸಿದರೆ ಕಮಿಷನ್ ನೀಡುವುದಾಗಿ ಅಪರಚಿತ ವ್ಯಕ್ತಿ ಹೇಳಿದ್ದ. ಇದನ್ನು ನಂಬಿದ ಸಹನಾ ಪೇಟಿಎಂ ಮೂಲಕ ಹಂತ ಹಂತವಾಗಿ 2.29 ಲಕ್ಷ ಹಣ ವರ್ಗಾಹಿಸಿದ್ದಾರೆ.
ಆಸೆಯಿಂದ 5 ಸಾವಿರದಿಂದ 20 ಸಾವಿರದವರೆಗೆ 16 ಬಾರಿ ಪೇಟಿಎಂ ಮೂಲಕ ಹಣ ಕಳುಹಿಸಿದ್ದಾರೆ. ಯಾವುದೇ ಕಮೀಷನ್ ಬಾರದೇ ಇದ್ದುದರಿಂದ ಹಣ ಹಾಕುವುದನ್ನು ನಿಲ್ಲಿಸಿದ್ಧಾರೆ. ನಿಮಗೆ ನೀಡಿದ ಟಾರ್ಗೆಟ್ ಪೂರ್ಣಗೊಳಿಸದೇ ಹಣ ವಾಪಸ್ ನೀಡುವುದಿಲ್ಲ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾಗ ಆನ್ ಲೈನ್ ವಂಚನೆ ಎಂಬುದು ಗೊತ್ತಾಗಿದೆ.ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.



