ಡಿವಿಜಿ ಸುದ್ದಿ, ದಾವಣಗೆರೆ: ನೀನು ಯಾರನ್ನಬೇಕಾದರೂ ಅತ್ಯಾಚಾರ ಮಾಡು, ನಾನು ನಿನ್ನನ್ನು ಬಿಡಿಸಿಕೊಂಡು ಬರುತ್ತೇನೆ ಎಂದು ಬಿಜೆಪಿ ಮುಖಂಡ ತನ್ನ ಆಪ್ತನೊಂದಿಗೆ ನಡೆಸಿದ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಯಿನಿ ನಿವಾಸಿ, ದಾವಣಗೆರೆ ಜಿಲ್ಲಾ ಓಬಿಸಿ ಮೋರ್ಚಾದ ಉಪಾಧ್ಯಕ್ಷ ಟೈಗರ್ ಅಂಜಿನಪ್ಪ ಸಾಗರ್ ನಡೆಸಿರುವ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೈರಲ್ ಆದ ಆಡಿಯೋ ಕೇಳಿದ ಬೇರೆ ಸಮಾಜ ಮುಖಂಡರು ಅಂಜಿನಪ್ಪ ಸಾಗರ್ ಬಂಧಿಸುವಂತೆ ಜಗಳೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ವೈರಲ್ ಆದ ಆಡಿಯೋದಲ್ಲಿ ಬಿಜೆಪಿ ಮುಖಂಡ ಅಂಜಿನಪ್ಪ ಸಾಗರ್ , ನೀ ಏನು ಬೇಕಾದ್ರೂ ಮಾಡು ನಾನು ಬಿಡಿಸಿಕೊಂಡು ಬರುತ್ತೇನೆ. ಕೆಲವು ಜಾತಿ ಹೆಸರು ಹೇಳಿ, ಆ ಜಾತಿಯವರ ಮೇಲೆಯೇ ಅತ್ಯಾಚಾರ ಮಾಡು, ನಾನು ಬಿಡಿಸಿಕೊಂಡು ಬರುತ್ತೇನೆ. ನಮ್ಮ ಜಾತಿಯವರಿಗೆ ಮಾತ್ರ ತೊಂದರೆ ಮಾಡ ಬೇಡ ಎಂದು ಬಿಜೆಪಿ ಮುಖಂಡ ಹೇಳಿದ್ಧಾನೆ. ಕೂಡಲೇ ಎಚ್ಚತ್ತ ಜಿಲ್ಲಾ ಬಿಜೆಪಿ ಘಟಕ ಅಂಜಿನಪ್ಪ ಸಾಗರ್ ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.



