ದಾವಣಗೆರೆ: ನಿವೃತ್ತ ಸ್ಟ್ಯಾಫ್ ನರ್ಸ್ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿಟ್ಟಿದ್ದ 2.28 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳ್ಳತನವಾಗಿದೆ.
ಜಯನಗರ ‘ಎ’ ಬ್ಲಾಕ್ ನಿವಾಸಿ ಎಚ್.ಎಸ್. ರಾಧಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಒಬ್ಬರೇ ವಾಸವಿದ್ದರು, ಏ.17ರಂದು ಕೊಟ್ಟೂರೇಶ್ವರ ಬಡಾವಣೆಯ ಮಗಳ ಮನೆಗೆ ಹೋಗಿದ್ದರು. ವಾಪಸ್ ಬಂದಾಗ ಕಳ್ಳತನವಾಗಿದೆ.
15 ಗ್ರಾಂ ತೂಕದ ಬಂಗಾರದ ಸರ, 4 ಗ್ರಾಂ ತೂಕದ ಮಕ್ಕಳ ಬಂಗಾರದ ಸರ, ಬಂಗಾರದ ಓಲೆ, ಉಂಗುರ ಸೇರಿ 1.38 ಲಕ್ಷದ ಬಂಗಾರ ಹಾಗೂ 90 ಸಾವಿರ ಬೆಳ್ಳಿ ಆಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



