ದಾವಣಗೆರೆ: ವಂಚನೆ ಒಳಗಾಗುವವರು ಎಲ್ಲಿವರೆಗೆ ಇರ್ತಾರೋ ಅಲ್ಲಿವರೆಗೆ ವಂಚನೆ ಮಾಡೋವರು ಕೂಡ ಇರ್ತಾರೆ. ಇದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ, ಇಲ್ಲೊಬ್ಬ ತಮ್ಮ ಮೊಬೈಲ್ ನಂಬರ್ ಗೆ ಬಂದ ಮೆಸೇಜ್ ನಂಬಿ ನೂರಲ್ಲ, ಇನ್ನೂರಲ್ಲ ಬರೋಬ್ಬರಿ 23.4 ಲಕ್ಷ ಕಳೆದುಕೊಂಡಿದ್ದಾನೆ.
ವಂಚಕರು ಕಳುಹಿಸಿದ ಆ ಒಂದು ಮೆಸೇಜ್ ನಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ. ನಿಮ್ಮ ಜಮೀನಲ್ಲಿ ಜಿಯೋ ಟವರ್ ಅಳವಡಿಸುತ್ತೇವೆ ಎಂದು ಬಂದ ಮೆಸೇಜ್ ನಂಬಿದ ದಾವಣಗೆರೆಯ ಸರಸ್ವತಿ ನಗರದ ರಾಜು (50) ವಿವಿಧ ಶುಲ್ಕವಾಗಿ 23.4 ಲಕ್ಷ ಕಟ್ಟಿ ಮೋಸ ಹೋಗಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



