ಹರಪನಹಳ್ಳಿ: ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲ್ಲೂಕಿನಾದ್ಯಂತ ಯಾವುದೇ ಸಭೆ ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಹಾಗಾಗಿ ಸಾರ್ವಜನಿಕರೂ ಗುಂಪು ಸೇರಬಾರದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಉಚ್ಚoಗಿದುರ್ಗ ಗ್ರಾಮ ಪಂಚಾಯಿತಿ,ಗ್ರಾಮ ಲೆಕ್ಕದಿಕಾರಿ,ಮುಜುರಾಯಿ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಎಲ್ಲಾ ದೇವಸ್ಥಾನಗಳಿಗೆ ಬೀಗ ಹಾಕಿ,ಗ್ರಾಮದಲ್ಲಿರುವ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿ ಹಾಲಮ್ಮ,ಪಾದಗಟ್ಟೆ,ಉಚ್ಚoಗೆಮ್ಮನ ದೇವಸ್ಥಾನಕ್ಕೆ ಬೀಗ ಹಾಕಿ ಮುಂದಿನ ಆದೇಶ ಬರುವವರೆಗೂ ಯಾರು ಗುಂಪು ಗುಂಪು ಸೇರಬಾರದು ಎಂದು ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಉಚ್ಚoಗೆಮ್ಮನ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಮಲ್ಲಪ್ಪ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಉಚ್ಚoಗೆಮ್ಮನ ದೇವಸ್ಥಾನ ಬಂದ್ ಮಾಡಿದ್ದು ಮುಂದಿನ ಆದೇಶದವೆರೆಗೂ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.



