ದಾವಣಗೆರೆ: ಜಿಲ್ಲೆಯಲ್ಲಿಂದು ದಾಖಲೆಯ438 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ದಾವಣಗೆರೆ 294, ಹರಿಹರ 44, ಜಗಳೂರು16, ಚನ್ನಗಿರಿ 25, ಹೊನ್ನಾಳಿ 36, ಹೊರ ಜಿಲ್ಲೆಯಿಂದ 23 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಈ ಮೂಲಕ ಸೋಂಕಿತರ ಸಂಖ್ಯೆ 26090ಕ್ಕೆ ಏರಿಕೆಯಾಗಿದೆ. ಇಂದು 150 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 23,893 ಮಂದಿ ಗುಣಮುಖರಾಗಿದ್ಧಾರೆ. ಜಿಲ್ಲೆಯಲ್ಲಿ ಇದುವರೆಗೆ 277 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 19,20 ಸಕ್ರಿಯ ಕೇಸ್ ಗಳಿವೆ.
ಇನ್ನು ಲೋಕಿಕೆರೆಯ 45 ಮಹಿಳೆ, ದಾವಣಗೆರೆಯ ಯಲ್ಲಮ್ಮನಗರದ 55 ವರ್ಷದ ಪುರ, ಎಂಸಿಸಿ ಬಿ ಬ್ಲಾಕ್ ನ 80 ವರ್ಷದ ವೃದ್ಧ, ಹೊನ್ನಾಳಿಯ 70 ವರ್ಷ ವೃದ್ಧ, ದಾವಣಗೆರೆಯ ಶಾಂತಿನಗರ 61 ವರ್ಷದ ಪುರುಷ ಹಾಗೂ ಜಗಳೂರಿನ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.



