ದಾವಣಗೆರೆ: ಸರ್ಕಾರದ ಸ್ವಲ್ಪ ಪ್ರಮಾಣದ ಕೊರೊನಾ ಕರ್ಫ್ಯೂಗೆ ಸಡಿಲಿಕೆ ಮಧ್ಯೆ ಜಿಲ್ಲೆಯಲ್ಲಿ 5ನೇ ದಿನ ಯಶಸ್ವಿಯಾಗಿದೆ. ಸರ್ಕಾರ ನಿನ್ನೆ ರಾತ್ರಿ ಮಾರ್ಗಸೂಚಿಯಲ್ಲಿ ಸಂತೆ, ಮಾರುಕಟ್ಟೆಗೆ ಪೂರ್ಣ ನಿಷೇಧ ಹೇರಿತ್ತು. ಆದರೆ, ರೈತರು ಬೆಳಗ್ಗೆ ಸಂತೆಗೆ ನಿನ್ನೆಯೇ ತಯಾರಾಗಿದ್ದರಿಂದ ಸಂತೆ ಎಂದಿನಂತೆ 10 ಗಂಟೆ ವರೆಗೆ ನಡೆಯಿತು.
ಇನ್ನು ದಿನಸಿ ಅಂಗಡಿ, ಎಪಿಎಂಸಿ ಹಾಗೂ ಹಾಪ್ ಕಾಮ್ಸ್ , ಹಾಲಿನ ಬೂತ್ ಗಳಿಗೆ ಸರ್ಕಾರ ಬೆಳಗ್ಗೆ 6 ರಿಂದ 12 ಗಂಟೆ ವರೆಗೆ ಅವಕಾಶ ನೀಡಿದೆ. ಇದರಿಂದ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಸ್ವಲ್ಪ ರಿಲೀಫ್ ನೀಡಿದಂತಾಗಿದೆ.
ಇದರ ಮಧ್ಯೆ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಿಲ್ಲೆಯ ಚೆಕ್ ಪೋಸ್ಟ್ , ಮುಖ್ಯ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿ ಕೇಸ್ ದಾಖಲಿಸಿದ್ದಾರೆ. ರಸ್ತೆಯಲ್ಲಿ ಮಾಸ್ಕ್ ಹಾಕದೆ ಓಡಾಡುವ 1,639 ಮಂದಿ ಮೇಲೆ ಕೇಸ್ ದಾಖಲಿಸಲಾಗಿದೆ. ಒಟ್ಟು 2,66,200 ರೂಪಾಯಿ ದಂಡ ಹಾಕಲಾಗಿದೆ. 21 ವಾಹನಗಳನ್ನು ಸೀಜ್ ಮಾಡಲಾಗಿದ್ದು, ಕೆಇಡಿ ಕಾಯ್ದೆ ಉಲ್ಲಂಘಿಸಿದ 25 ಕೇಸ್ ದಾಖಲಾಗಿದೆ.