ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಏರು ಗತಿಯಲ್ಲಿದ್ದ ಕೊರೊನಾ ಕೇಸ್ ಗಳ ಸಂಖ್ಯೆ ಇಂದು ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 104 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 224 ಮಂದಿ ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ.
ದಾವಣಗೆರೆಯಲ್ಲಿ 48, ಹರಿಹರ 15, ಜಗಳೂರು 07, ಚನ್ನಗಿರಿ 6, ಹೊನ್ನಾಳಿ 22, ಹೊರ ಜಿಲ್ಲೆಯಿಂದ 06 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26, 8797ಕ್ಕೆ ಏರಿಕೆಯಾಗಿದೆ. ಇದುವರೆಗೆ 24, 584 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೂರು ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು 288 ಮಂದಿ ಸಾವನ್ನಪ್ಪಿದ್ದಾರೆ. ಹರಿಹರದ ಜೆಸಿ ಬಡಾವಣೆಯ 28 ವರ್ಷದ ಯುಕ, ದಾವಣಗೆರೆಯ ಪಿಜೆ ಬಡಾವಣೆಯ 64 ವರ್ಷ ಪುರುಷ ಹಾಗೂ ಹರಿಹರ ಗುತ್ತೂರು ಕಾಲೋನಿಯ 55 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.



