ದಾವಣಗೆರೆ: ಸಾರ್ವಜನಿಕರು ವಾರಕ್ಕೆ ಆಗುವಷ್ಟು ತರಕಾರಿ, ರೇಷನ್ ಒಂದೇ ಸಲ ತೆಗೆದು ಹೋಗಬೇಕು. ಪ್ರತಿ ದಿನ ಮನೆಯಿಂದ ಹೊರಗೆ ಬರಬೇಡಿ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು
ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ಘಟಕ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಬರಬೇಕಾದ್ರೆ ಜನರ ರಶ್ ಕಡಿಮೆ ಆಗಬೇಕು. ಜನರು ಪ್ರತಿ ದಿನ ಮಾರುಕಟ್ಟೆಗೆ ರೇಷನ್ ಕೊಳ್ಳಲು ಬಂದ್ರೆ, ಕೊರೊನಾ ನಿಯಂತ್ರಣಕ್ಕೆ ಬರಲ್ಲ. ಹೀಗಾಗಿ ಜನರು ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನು ಒಮ್ಮೆಲೇ ತೆಗೆದುಕೊಂಡು ಹೋಗುವುದು ಉತ್ತಮ ಎಂದು ತಿಳಿಸಿದರು.
ನಿಮ್ಮ ಜೀವ ಉಳಿಯಬೇಕಾದ್ರೆ, ಆದಷ್ಟು ಹೊರಗೆ ಬರುವುದನ್ನು ಕಡಿಮೆ. ಸಾಮಾಜಿಕ ಅಂತರ, ಮಾಸ್ಕ್, ಸಾನಿಟೈಸರ್ ಉಪಯೋಗಿಸಿ. ನಿಮ್ಮ ಜೀವ ಉಳಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ನಿಮ್ಮಲ್ಲಿ ಕೈಮಗಿದು ಕೇಳಿಕೊಳ್ಳುತ್ತೇನೆ ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನು ಒಮ್ಮೆಲೇ ತೆದುಕೊಂಡು ಹೋಗಿ ಸಾಮಾಜಿಕ ಅಂತರ ಕಾಪಾಡಿ ಎಂದು ಸಲಹೆ ನೀಡಿದರು.



