ದಾವಣಗೆರೆ: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಬುಧವಾರ ಲಸಿಕಾ ಮೇಳ ಆಯೋಜಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದು, ಅದರಂತೆ ಸೆ. 22 ರಂದು ದಾವಣಗೆರೆ ತಾಲ್ಲೂಕಿನಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ, ಸಮುದಾಯ ಆರೋಗ್ಯ ಸಂಸ್ಥೆ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 15000 ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ವ್ಯಕ್ತಿಗಳು ಮೊದಲ ಹಾಗೂ ಎರಡನೆ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಕೋವಿಡ್ ನಿರೋಧಕ ಲಸಿಕಾಕರಣದ ಪ್ರಗತಿ ವೃದ್ಧಿಯ ಉದ್ದೇಶದಿಂದ ಪ್ರತಿ ಬುಧವಾರ ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿದ್ದು, ದಾವಣಗೆರೆ ತಾಲ್ಲೂಕಿನ ಎಲ್ಲ 35 ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ನಿರೋಧಕ ಲಸಿಕೆಯನ್ನು ಹಾಕುವ ಕಾರ್ಯಕ್ರಮದಡಿ ಸೆ. 22 ರಂದು ಕೋವಿಶೀಲ್ಡ್-15000 ಲಸಿಕೆ ಹಂಚಿಕೆ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ 01 ನೇ ಅಥವಾ 02ನೇ ಡೋಸ್ ಲಸಿಕೆ ತಪ್ಪದೆ ಪಡೆಯುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಆಲೂರು, ಆಲೂರಹಟ್ಟಿ, ಆನಗೋಡು, ಅಣಜಿ, ಅರಸಾಪುರ, ಬಾಡಾ, ದೊಡ್ಡಬಾತಿ, ಹದಡಿ, ಹೆಬ್ಬಾಳು, ಹೆಮ್ಮನಬೇತೂರು, ಹೊನ್ನೂರು, ಹೂವಿನಮಡು, ಹುಚ್ಚವ್ವನಹಳ್ಳಿ, ಐಗೂರು, ಕಕ್ಕರಗೊಳ್ಳ, ಕಂದಗಲ್ಲು, ಕೊಡಗನೂರು, ಲೋಕಿಕೆರೆ, ಮಳಲ್ಕೆರೆ, ಮಾಯಕೊಂಡ, ನಲಕುಂದ, ನೇರ್ಲಿಗೆ, ಆರ್‍ಜಿ. ಹಳ್ಳಿ, ಶ್ಯಾಗಲೆ, ತೋಳಹುಣಸೆ ಗ್ರಾಮಗಳಲ್ಲಿನ ಆರೋಗ್ಯ ಸಂಸ್ಥೆಗಳಿಗೆ ಒಟ್ಟಾರೆ 7400 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ.
ದಾವಣಗೆರೆ ನಗರದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಆಜಾದ್‍ನಗರ, ಬಾಷಾನಗರ, ಭಾರತ್ ಕಾಲೋನಿ, ದೊಡ್ಡಪೇಟೆ, ಸೇಂಟ್‍ಫಾಲ್ಸ್ ಶಾಲೆ ಬಳಿಯ ನಗರ ಆರೋಗ್ಯ ಕೇಂದ್ರ, ರಾಮನಗರ, ಹೆಚ್‍ಕೆಆರ್ ನಗರ, ಎಸ್‍ಎಂಕೆ ನಗರ ಹಾಗೂ ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರಗಳಿಗೆ ಒಟ್ಟಾರೆ 7600 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದ್ದು, 18 ವರ್ಷ ಮೇಲ್ಪಟ್ಟ ಅರ್ಹರಿಗೆ 1ನೇ ಡೋಸ್ ಹಾಗೂ 2ನೇ ಡೋಸ್ ಲಸಿಕೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.



