Advertisement

ದಾವಣಗೆರೆ: ಮೊದಲ ದಿನದ ಕೊರೊನಾ ಕರ್ಫ್ಯೂಗೆ ಉತ್ತಮ ಬೆಂಬಲ

ದಾವಣಗೆರೆ: ಮೊದಲ ದಿನದ ಕೊರೊನಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ವ್ಯಾಪಾರಸ್ಥರು ಅಂಗಡಿ‌‌ಗಳನ್ನು ಮುಚ್ಚಿ ಕರ್ಫ್ಯೂ ಬೆಂಬಲಿಸಿದರು.

ಬೆಳಗ್ಗೆಯಿಂದ ಅಗತ್ಯ ವಸ್ತು ಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡರು. ಹಾಲು, ಹಣ್ಣು, ತರಕಾರಿ, ರೇಷನ್ ಸೇರಿದಂತೆ ಎಲ್ಲ ಅಂಗಡಿಗಳು ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಅವಕಾಶವಿತ್ತು.

ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು ಪ್ರತಿ ಸರ್ಕಲ್ ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿಕೊಂಡು ಕಾಯುತ್ತಿದ್ದಾರೆ. 10 ಗಂಟೆ ಆಗುತ್ತಿದಂತೆ ಪೊಲೀಸರ್ ಪೊಲೀಸರ ಕೂಡ ಅಂಗಡಿಗಳನ್ನು ಮುಚ್ಚಿಸಿದರು. ನಿಯಮ ಉಲ್ಲಂಘಿಸಿದವರಿಗೆ ದಂಡ ಕೂಡ ವಿಧಿಸುತ್ತಿದ್ದಾರೆ.

ತರಕಾರಿ ವ್ಯಾಪಾರಿಗಳು, ರೈತರು 10 ಗಂಟೆಯೊಳಗೆ ಎಷ್ಟು ಆಗುತ್ತೋ ಅಷ್ಟನ್ನು ಮಾರಾಟ ಮಾಡಿ,ಉಳಿದಿದ್ದನ್ನು ಗಂಟು ಕಟ್ಟಿಕೊಂಡು ಮನೆಗೆ ಹೋದರು. ಬೆಳಗ್ಗೆ 12 ಗಂಟೆ ವರೆಗೂ ಆದರೂ ಅವಕಾಶ ಕಲ್ಪಿಸಬೇಕು ಎಂದು ರೈತರು, ವ್ಯಾಪಾರಸ್ಥರು ಸರ್ಕಾರವನ್ನು ಆಗ್ರಹಿಸಿದರು. ನಾವು ಊರಿಂದ ತರಕಾರಿ ತಂದು ವ್ಯಾಪಾರ ಪ್ರಾರಂಭವಾಗುವುದೇ 8 ಗಂಟೆಯಿಂದ ಎರಡು ತಾಸಿನಲ್ಲಿ ಎಲ್ಲ ತರಕಾರಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ 12 ಗಂಟೆ ವರೆಗೂ ಆದರೂ ಅವಕಾಶ ನೀಡಬೇಕು ರೈತ ಮಂಜಪ್ಪ ಅಭಿಪ್ರಾಯಟ್ಟರು.

ನಗರದ ಎಪಿಎಂಸಿ ಮಾರುಕಟ್ಟೆ, ಗಡಿಯಾರ ಕಂಬ, ಕಾಯಿ ಪೇಟೆ, ಕೆ.ಆರ್ ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆ ಪೊಲೀಸರು 10 ಗಂಟೆ ಆಗುತ್ತಿದ್ದಂತೆ ಎಲ್ಲ ಕ್ಲೋಸ್ ಮಾಡಿಸಿದರು. ಇನ್ನು ಕಟ್ಟಡ ಕಾರ್ಮಿಕರಿಗೆ ಯಾವುದೇ ನಿರ್ಭಂದ ವಿಧಿಸಿಲ್ಲದಿದ್ದರಿಂದ ನಗರದ ಕಟ್ಟಡ ಕಾಮಗಾರಿ ಅಭಿವೃದ್ಧಿ, ಪಾದಚಾರಿ ಮಾರ್ಗ ಕಾಮಗಾರಿಗಳು ನಡೆಯುತ್ತಿವೆ. ಮರಳು, ಎಂ ಸ್ಯಾಂಡ್, ಜಲ್ಲಿ ಕಲ್ಲು ಸಾಗಣಿಕೆ ಕೂಡ ನಡೆಯುತ್ತಿದೆ.

ಕೃಷಿ ಸಂಬಂಧಿತ ಬೀಜ, ಗೊಬ್ಬರ, ಔಷಧಿ ಕೊಳ್ಳು ಅವಕಾಶ ಕಲ್ಪಿಸಿದ್ದು, ರೈತರ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ತಮ್ಮದೇ ಟ್ರ್ಯಾಕ್ಟರ್ ಗಳಲ್ಲಿ ಖರೀಸಿದ ವಸ್ತುಗಳನ್ನು ಹಾಕಿಕೊಂಡು ಹೋಗುತ್ತಿದ್ದಾರೆ.ಖಾಸಗಿ, ಸರ್ಕಾರಿ ಬಸ್ ಸೇರಿದಂತೆ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿತ್ತು.

Dvgsuddi: Dvgsuddi.com is a live Kannada news portal. Kannada news online. political, information, crime, film, Sports News in Kannada
Related Post
Recent Posts