ದಾವಣಗೆರೆ: ರಾಜಧನ ಸಂಗ್ರಹಣೆಯಲ್ಲಿ ರಾಜ್ಯ ಉತ್ತಮವಾಗಿದ್ದು, ಫೆಬ್ರವರಿ ತಿಂಗಳ ಎರಡನೇ ವಾರ ಜನಪರ ಬಜೆಟ್ ಮಂಡನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿಎಂಐಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳವರೆಗೆ ರಾಜಧನ ಸಂಗ್ರಹಣೆ ಉತ್ತಮವಾಗಿದೆ. ಎಲ್ಲ ರೀತಿಯ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಇದರ ಆಧಾರದ ಮೇಲೆ ಬಜೆಟ್ ಗಾತ್ರ ನಿರ್ಧಾರ ಮಾಡುತ್ತೇವೆ. ಸಂಕ್ರಾಂತಿ ನಂತರ ಎಲ್ಲ ಇಲಾಖೆವಾರು ಸಭೆ ನಡೆಸಿ ಬಜೆಟ್ ಗಾಟತ್ರದ ಬಗ್ಗೆ ಒಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಬಾರಿಯ ಬಜೆಟ್ ಜನಪರ ಬಜೆಟ್ ಆಗಲಿದೆ ಎಂದು ತಿಳಿಸಿದರು.



