ಚಿತ್ರದುರ್ಗ: ಆಟೋದಲ್ಲಿ ಸಂಬಂಧಿ ಶವಸಂಸ್ಕಾರಕ್ಕೆಂದು ತೆರಳುತ್ತಿದ್ದವರ ಮೇಲೆ ಯಮ ರೂಪದಲ್ಲಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರ ಸಾವನ್ನಪ್ಪಿದ್ದಾರೆ.
ಈ ಭೀಕರ ದುರ್ಘಟನೆ ರಾಷ್ಟ್ರೀಯ 48ರ ಕಾತ್ರಾಳ್ ಕೆರೆ ಸೇತುವೆ ಸಂಭವಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರು ಜಗಳೂರು ತಾಲೂಕು ಕೆಳಗೋಟೆ ನಿವಾಸಿಗಳಾದ ಹಾಲಪ್ಪ (70), ರುದ್ರಮ್ಮ (58), ಸಣ್ಣಬಸವರಾಜಪ್ಪ(45) ಎಂದು ಗುರುತಿಸಲಾಗಿದೆ.
ಸಂಬಂಧಿಯ ಶವಸಂಸ್ಕಾರಕ್ಕೆ ತ ಆಟೋದಲ್ಲಿ ತೆರಳುತ್ತಿದ್ದರು.ಕೆಳಗೋಟೆ ಗ್ರಾಮದ 10 ಜನರಿದ್ದ ಪ್ಯಾಸೆಂಜರ್ ಆಟೋಕ್ಕೆ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರಲ್ಲಿ ಹಾಲಪ್ಪ ಜಿಲ್ಲಾಸ್ಪತ್ರೆಯಲ್ಲಿ, ರುದ್ರಮ್ಮ ಬಸವೇಶ್ವರ ಆಸ್ಪತ್ರೆಯಲ್ಲಿ ಹಾಗೂ ಸಣ್ಣ ಬಸವರಾಜಪ್ಪ ಮಣಿಪಾಲ್ಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಕಲ್ಲೇಶಪ್ಪ, ಚಂದ್ರಪ್ಪ, ಪಾರ್ವತಮ್ಮ, ರುದ್ರೇಶಪ್ಪ, ಸಿದ್ದೇಶ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಚಿತ್ರದುರ್ಗ ಗ್ರಾಮಾಂತರ ಠಾಣ ವ್ಯಾಪ್ತಿಯಲ್ಲಿ ಘಟೆನೆ ನಡೆದಿದೆ. ಎಸ್ಪಿ ಕೆ.ಪರಶುರಾಮ, ಗ್ರಾಮಾಂತರ ಪಿಐ ಬಾಲಚಂದ್ರನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.