Connect with us

Dvgsuddi Kannada | online news portal | Kannada news online

ತರಳಬಾಳು ಮಠ: ಮುಕ್ತ ಚರ್ಚೆಗೆ ಸದಾ ಸಿದ್ಧ; ಪೀಠಕ್ಕೆ ಅಂಟಿಕೊಂಡು ಕುಳಿತಿಲ್ಲ- ಕೋರ್ಟ್ ನಲ್ಲಿ ಕೇಸ್ ವಾಪಸ್ ಪಡೆದು ಮಠಕ್ಕೆ ಚರ್ಚೆಗೆ ಬರಲಿ- ತರಳಬಾಳು ಶ್ರೀ

ಪ್ರಮುಖ ಸುದ್ದಿ

ತರಳಬಾಳು ಮಠ: ಮುಕ್ತ ಚರ್ಚೆಗೆ ಸದಾ ಸಿದ್ಧ; ಪೀಠಕ್ಕೆ ಅಂಟಿಕೊಂಡು ಕುಳಿತಿಲ್ಲ- ಕೋರ್ಟ್ ನಲ್ಲಿ ಕೇಸ್ ವಾಪಸ್ ಪಡೆದು ಮಠಕ್ಕೆ ಚರ್ಚೆಗೆ ಬರಲಿ- ತರಳಬಾಳು ಶ್ರೀ

ಸಿರಿಗೆರೆ: ತರಳಬಾಳು ಬೃಹನ್ಮಠ ಸಿರಿಗೆರೆ, ಶಾಖಾ ಮಠ ಸಾಣೇಹಳ್ಳಿ ಪೀಠಕ್ಕೆ ಉತ್ತರಾಧಿಕಾರಿಗಳ ನೇಮಕ ಸಂಬಂಧ ದಾವಣಗೆರೆಯಲ್ಲಿ ನಿನ್ನೆ ( ಆ.4) ನಡೆದ ಸಾದರ ಲಿಂಗಾಯತ ಒಕ್ಕೂಟ ಸಭೆ ಹಿನ್ನೆಲೆ ಇಂದು (ಆ.5) ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಸಾವಿರಾರು ಭಕ್ತರು ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಬೃಹನ್ಮಠದಲ್ಲಿ ಭಕ್ತರು, ಸಮಾಜದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸದ್ಭಕ್ತರು ಜಮಾಯಿಸಿದ್ದರು. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರ ಘೋಷಣೆ ಕೂಗಿದರು. ನಿನ್ನೆ ದಾವಣಗೆರೆಯಲ್ಲಿ‌ ನಡೆದ ಸಭೆಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಸಭೆ ವಿರೋಧಿಸಿ ಶ್ರೀಗಳು ಕರೆ ಕೊಡದಿದ್ದರೂ ಸಮಾಜದ ಮುಖಂಡರ ಕರೆಗೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀವೆ. ಶ್ರೀಗಳು ಯಾರ ಬೆದರಿಕೆಗೂ ಅಂಜಬೇಕಿಲ್ಲ. ಮಠ ಜತೆ ನಾವಿದ್ದೇವೆ.ನೀವೇ ಮುಂದುವರಿಯಬೇಕೆಂದು ಭಕ್ತರು ಆಗ್ರಹಿಸಿದರು.

ಜಗದ್ಗುರುಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚಿತ್ರದುರ್ಗ ಸಿರಿಗೆರೆಯ ತರಳಬಾಳು ಬೃಹನ್ಮಠ ಪೀಠಕ್ಕೆ ನಾವು ಅಂಟಿಕೊಂಡು ಕುಳಿತಿಲ್ಲ. ಧರ್ಮ, ಕಾನೂನು ಪಾಲನೆ ಮಾಡುವ ಸಲುವಾಗಿ ನಾನು ಮುಂದುವರಿಯುತ್ತಿದ್ದೇನೆ. ಭಕ್ತರ ಇಚ್ಚೆಯಂತೆ ನಿರ್ಧಾರ ಕೈಗೊಳಗಳುತ್ತೇವೆ. ಕೆಲವರು ಡೀಡ್ ವಿಚಾರ ಸಂಬಂಧ ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ನಲ್ಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರಲಿ. ಮುಕ್ತ ಚರ್ಚೆಗೆ ನಾವು ಸದಾ ಸಿದ್ಧರಿದ್ದೇವೆ. ಸಮಾಜ, ಸಮುದಾಯಕ್ಕೆ ಒಳಿತಾಗಬೇಕು ಎಂಬುದು ಕೂಡ ನಮ್ಮ ಆಶಯವಾಗಿದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಠದ ಬಗ್ಗೆ ಮೊದಲಿನಿಂದ ಉತ್ತಮ ಬಾಂಧವ್ಯ ಹೊಂದಿದ್ದಾರೆ.‌ ಆದರೆ,ನಿನ್ನೆ ಸಭೆಗೆ ಯಾಕೆ ಹೋದರು ಎಂಬುದು ಗೊತ್ತಿಲ್ಲ. ಈ ನಮ್ಮ ಬಳಿ ಫೊನ್ ನಲ್ಲಿ ವಿಚಾರ ವಿನಿಮಯ ನಡೆಯುತಗತಿದ್ದವು. ಆದ್ರೆ, ಇದ್ದಕ್ಕಿದ್ದ ಹಾಗೆ ಈ ರೀತಿ ನಡೆದುಕೊಂಡಿರುವುದು ಬೇಸರ ತರಿಸಿದೆ ಎಂದರು.

ನಾವೇ ಪೀಠದಲ್ಲೇ ಇರಬೇಕೆಂಬ ಆಸೆ ಹೊಂದಿಲ್ಲ. ಕೋರ್ಟ್ ನಲ್ಲಿನ ಕೇಸ್ ವಾಪಸ್ ಪಡೆದು ಬರಲಿ. ಎಲ್ಲಾ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಿ. ಮುಕ್ತವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲೋ ಸಭೆ ಮಾಡಿ ಆರೋಪ ಮಾಡುವುದು ನಿಲ್ಲಬೇಕು. ಮಠಕ್ಕೆ ಬಂದು ಚರ್ಚೆ ಮಾಡಲಿ. ಸಮಾಜದ ಭಕ್ತರ ಆಕ್ರೋಶ ನೋಡಿದ್ರೆ ಭಯ ಆಗುತ್ತಸೆ. ಶಾಂತಿಯುತವಾಗಿ ವರ್ತಿಸಿ, ಸಿಟ್ಟಿ ಮೂಗು ಕೊಯ್ದುಕೊಂಡಂತೆ ಆಗಬಾರದು ಎಂದು ಶ್ರೀಗಳು ಸಲಹೆ ನೀಡಿದರು.

ಮಠದ ಆಡಳಿತ ಸೇರಿ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿವೆ. ಮಠದಿಂದ ಉಚ್ಚಾಟನೆಯಾದವರು,ಉಪಕಾರ ಪಡೆದು ಮಠಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. ‌ಇಂತಹ ಆರೋಪಕ್ಕೆ ಜಗ್ಗಲ್ಲ, ಬಗ್ಗಲ್ಲ. ನಿಮ್ಮ ಬಳಿ ಏನೇ ಇದ್ದರೂ ಅವ್ಯವಹಾರ ಸಾಕ್ಷಿ ಇದ್ದರೂ, ಸಾಕ್ಷಿ ಸಮೇತ ಮಠಕ್ಕೆ ಬರಲಿ, ಸಮಾಜದವರೆಲ್ಲರೂ ಸೇರಿ ಒಟ್ಟಾಗಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು ಎಲ್ಲೋ ಸಭೆ ನಡೆಸಿ, ಆರೋಪ ಮಾಡಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸತ್ಯವಿದ್ದರೆ ಆರೋಪ ಮಾಡಬೇಕು. ಯಾರೋ ಮೆಚ್ಚಿಸಲು ಆರೋಪ ಸರಿಯಲ್ಲ ಎಂದು ತಿಳಿಸಿದರು.

ನೆರೆದ ಭಕ್ತರು, ನೀವೇ ಮುಂದುವರಿಯಬೇಕು. ಕೊನೆಯ ಉಸಿರು ಇರುವವರೆಗೂ ಪೀಠಾಧಿಪತಿಗಳಾಗಿ ಇರಬೇಕು. ನಿಮ್ಮ ಕೃಪೆಯಿಂದ ಕೆರೆಗಳು ತುಂಬಿ, ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ.ಯಾವ ಒತ್ತಡಕ್ಕೂ ಜಗ್ಗದೆ ಮಠ ಮುನ್ನಡೆಸಿಕೊಂಡು ಬಂದಿದ್ದೀರಿ. ದಾವಣಗೆರೆ ಸಭೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸದ್ಭಕ್ತರು ನಿಮ್ಮೊಟ್ಟಿಗೆ ಇದ್ದೇವೆ ಎಂದರು.

ನೀವು ಪೀಠ ತ್ಯಜಿಸುವುದಾಗಿ ಹೇಳಿದಾಗಲೂ ನಾವೆಲ್ಲರೂ ಸೇರಿ ನಿಮ್ಮನ್ನೇ ಮುಂದುವರಿಸಿದೆವು. ಭಕ್ತರ ಪ್ರೀತಿಯ ಒತ್ತಾಯಕ್ಕೆ ಮಣಿದು ಮುಂದುವರೆದ್ದೀರಿ. ಈಗಲೂ ಆತುರದ ನಿರ್ಧಾರ ಬೇಡ ಎಂದು ಮನವಿ ಮಾಡಿದರು.

ಅಣಬೇರು ರಾಜಣ್ಣ ವಿರುದ್ಧ ಆಕ್ರೋಶ; ಸಮಾಜ ಮತ್ತು ಮಠಕ್ಕೆ ಅಣಬೇರು ರಾಜಣ್ಣ ಕೊಡುಗೆ ಏನು..? ಅವರ ವೈಯಕ್ತಿ ಯಾವುದೋ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ಸಮಾಜ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ ಸ್ಥಾಪಿಸಲಾಗಿದೆ. ಸದಾ ಹೊಸತನದೊಂದಿಗೆ ಕನ್ನಡ ಮಾಧ್ಯಮ ಲೋಕ, ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ. ರೇಡಿಯೋ, ಪತ್ರಿಕೆ, ಟಿವಿ ಮಾಧ್ಯಮಗಳ ಪ್ರಭಾವ ಮಧ್ಯೆ, ಡಿಜಿಟಲ್ ಮಾಧ್ಯಮವೂ ಕ್ಷಣಾರ್ಧದಲ್ಲಿ ಸುದ್ದಿಯನ್ನು ಇಡೀ ಲೋಕಕ್ಕೆ ತಲುಪಿಸುವ ನವ ಮಾಧ್ಯಮವಾಗಿದೆ. ಡಿವಿಜಿಸುದ್ದಿ‌.ಕಾಂ ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಹತ್ತು ವರ್ಷಕ್ಕೂ ಹೆಚ್ಚು‌ ಕಾಲದ ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top