ದಾವಣಗೆರೆ: ನಾಳೆ (ಏ.17) ನಗರದ ಎವಿಕೆ ಕಾಲೇಜ್ ರಸ್ತೆ ಯಲ್ಲಿ ನಡೆಯಲಿರುವ ಪ್ರಥಮ ದಾವಣಗೆರೆ ಚಿತ್ರಸಂತೆಯ ಹಂದರ ಕಂಬ ಪೂಜಾ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯ ಜಿ. ಎಂ.ಸಿದ್ದೇಶ್ವರ ಇಂದು ನೆರವೇರಿಸಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವ ಚಿತ್ರಕಲಾ ಸಂತೆ ಗೆ ನಗರದ ಜನತೆ ಹೆಚ್ಚು ಸಂಖ್ಯೆಯಲ್ಲಿ ಬಂದು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕಲಾವಿದರ ಕಲಾಕೃತಿ ವೀಕ್ಷಿಸಿ, ಖರೀದಿಸಿ ಕಲಾವಿದರನ್ನು ಪ್ರೊತ್ಸಾಹಿಸಿ ಎಂದು ಸಂಸದ ಸಿದ್ದೇಶ್ವರ ಹೇಳಿದರು.
ಮೇಯರ್ ಜಯಮ್ಮ ಗೋಪನಾಯ್ಕ ಮಾತನಾಡಿ, ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸಹಕಾರವಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ. ಚಿತ್ರಕಲಾ ಸಂತೆಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಮೇಯರ್ ಬಿ. ಜಿ. ಅಜಯಕುಮಾರ್ ಈ ಕಾರ್ಯಕ್ರಮ ಯಶಸ್ವಿಗೆ ಜಿಲ್ಲೆಯ ಜನತೆ ಆಗಮಿಸಿ ಚಿತ್ರಸಂತೆಯನ್ನು ನೋಡಿಬೇಕು ಎಂದರು.
ದಾವಣಗೆರೆ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಸದಾನಂದ ಹೆಗಡೆ, ಡಿ. ಶೇಷಾಚಲ, ರವಿ ಹುದ್ದಾರ, ಶಾಂತಯ್ಯ ಪರಡಿಮಠ, ಜೆ ಜಿ ವಿಜಯಕುಮಾರ, ಅಶೋಕ, ಕಿರಣ ಕುಮಾರ ,ಅಶ್ವಿನಿ , ಉಪಸ್ಥಿತರಿದ್ದರು.



