ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯ ಮೂರು ವರ್ಷದ ಮಗುವೊಂದು ನೀರಿನ ತೊಟ್ಟಿಯಲ್ಲಿ ಬಿದ್ದು, ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ತುಂಗಭದ್ರಾ ಬಡಾವಣೆಯ ಆಸದ್ (3) ಮೃತಪಟ್ಟ ಮಗು. ತೊಟ್ಟಿಯಿಂದ ಮೇಲೆ ಎತ್ತಿದ ತಕ್ಷಣ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಸೂಕ್ತ ಚಿಕಿತ್ಸೆ ನೀಡದ್ದರಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಸಂಬಂಧಿಗಳು, ಆಸ್ಪತ್ರೆ ಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ್ದಾರೆ.
ಗುಂಪಿನಲ್ಲಿದ್ದವರು ಯಾರೋ ಕಲ್ಲು ತೂರಿದ್ದರಿಂದ ಆಸ್ಪತ್ರೆ ಆವರಣದಲ್ಲಿದ್ದ ಆಂಬ್ಯುಲೆನ್ಸ್ ಗಾಜು ಒಡೆದಿದೆ. ನೀರಿನ ತೊಟ್ಟಿಯಲ್ಲಿ ಬಿದ್ದ ಮಗುವನ್ನು ಆಸ್ಪತ್ರೆಗೆ ಕರೆ ತಂದಾಗ ಸರಿಯಾಗಿ ಪರೀಕ್ಷಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಗೊಳಿಸಿದರು.



