ದಾವಣಗೆರೆ: ಜೋಕಾಲಿ ಆಡುವಾಗ ಕೊರಳಿಗೆ ಉರುಳು ಬಿದ್ದು ಬಾಲಕ ಮೃತಪಟ್ಟ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ.
ಕೊಟ್ರೇಶಿ (13) ಮೃತಪಟ್ಟ ಬಾಲಕನಾಗಿದ್ದಾನೆ. ಶಾಲೆಯಿಂದ ಬಂದನು ಮನೆಯಲ್ಲಿಯೇ ಇದ್ದ ಜೋಕಾಲಿ ಆಡುವಾಗ ಈ ದುರ್ಘಟನೆ ನಡೆದಿದೆ. ಶಿವಮೊಗ್ಗ ಜ್ಞಾನಸಾಗರ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬಾಲಕನ ತಂದೆ ಎನ್.ಜಿ. ಪ್ರವೀಣ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



