ಚನ್ನಗಿರಿ: ಫ್ರೀ ಸೈಟ್ ಸಿಗುತ್ತಿದೆ ಎನ್ನುವ ಸುದ್ದಿಗೆ ಮರುಳಾದ ಜನರು ಓಡೋಡಿ ಬಂದ ಘಟನೆ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಚಿಕ್ಕುಲಿಕೆರೆ ಗ್ರಾಮದ ಬಳಿ ಸುಮಾರು 150 ಎಕರೆ ಜಮೀನನ್ನು ಉಚಿತವಾಗಿ ಹಂಚಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುರಸಭೆ ಸದಸ್ಯರು ಈ ರೀತಿ ಹೇಳಿದ್ದಾರೆ ಎಂಬ ಸುದ್ದಿಗೆ ಜನ ಗುಂಪು ಗುಂಪಾಗಿ ಬಂದಿದ್ದರು. ಖಾಲಿ ಜಾಗಕ್ಕೆ ಬೇಲಿ ಹಾಕಲು ಎದ್ನೋ ಬಿದ್ನೋ ಅಂತಾ ಓಡೋಡಿ ಬಂದಿದ್ದಾರೆ.

ಬೇಲಿ ಹಾಕಲು ಬಂದ ಜನರನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ಜಮೀನು ಹಂಚಿಕೆ ಮಾಡ್ತಿಲ್ಲ. ಎಲ್ಲರೂ ಹೋಗಿ ಅಂತಾ ಜನರನ್ನ ವಾಪಸ್ ಕಳಿಸಿದರು. ಆಗ, ಜನರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರಗೊಂಡು ಹೊರಟು ಹೋದರು.



