ದಾವಣಗೆರೆ: ಅರಣ್ಯ ಭೂಮಿ ಒತ್ತುವರಿ ಮಾಡಿ ಅಡಿಕೆ, ಬಾಳಿ ಹಾಕಿದ ರೈತರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಅದರಲ್ಲೂ ಫಸಲಿಗೆ ಬಂದ 15 ಎಕರೆಯ ಅಡಿಕೆ, ಬಾಳೆ ಬೆಳೆ ನಾಶ ಮಾಡಿ ಒತ್ತುವರಿಯಾದ ಭೂಮಿ ಅರಣ್ಯ ಇಲಾಖೆ ಪುನಃ ವಶಪಡಿಸಿಕೊಂಡಿದೆ. ಇದರಿಂದ ಕಷ್ಠಪಟ್ಟು ಬೆಳೆದ ಫಸಲಿಗೆ ಬಂದಿದ್ದ 3 ಸಾವಿರ ಬಾಳೆ, ಅಡಿಕೆ ಮರನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ತೆರವು ಮಾಡಿದ್ದಾರೆ.
ಚನ್ನಗಿರಿ ತಾಲೂಕಿನ ಶಾಂತಿಸಾಗರದ ಗುಡುಂಘಟ್ಟದ ಸರ್ವೇ ನಂ. 43 ರಲ್ಲಿ 15 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿತ್ತು. ಒತ್ತುವರಿಯಾದ ಭೂಮಿಯಲ್ಲಿ ರೈತರು ಅಡಿಕೆ ಮತ್ತು ಬಾಳೆ ಬೆಳೆಯನ್ನ ಬೆಳೆದಿದ್ದರು. ಇದೀಗ ಅರಣ್ಯ ಅಧಿಕಾರಿಗಳು ಒತ್ತುವರಿ ತೆರವು ಮಾಡಿ, ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಸುಮಾರು ವರ್ಷಗಳಿಂದ ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಅಲ್ಲಿ ಬೆಳೆಗಳನ್ನ ಬೆಳೆಯುತ್ತಾ ಬಂದಿದ್ದರು. ಆ ನಂತರ ಯಾರೂ ಕೇಳದಿದ್ದಾಗ ಅಡಿಕೆ ತೋಟ ಮಾಡಿದ್ದರು.



