ದಾವಣಗೆರೆ: ರೈತರ ಪಂಪ್ ಸೆಟ್ ಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಸಲು ಯಾವುದೇ ಲಂಚ ಸ್ವೀಕರಿಸಲ್ಲ ಎಂದು ಬೆಸ್ಕಾಂ ಇಂಜಿನಿಯರ್ ಗಳು ದೇವಸ್ಥಾನದಲ್ಲಿ ಆಣೆ, ಪ್ರಮಾಣ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ನಡೆದಿದೆ.
ರಾಜ್ಯದ ಜನತೆಗೆ ಸರ್ಕಾರದಿಂದ ಶಾಕ್ ; ಪ್ರತಿ ಯೂನಿಟ್ ವಿದ್ಯುತ್ ಗೆ 36 ಪೈಸೆ ಹೆಚ್ಚಳ ಮಾಡಿ ಆದೇಶ
ರಾಜ್ಯ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಕ್ರಮ- ಸಕ್ರಮ ಯೋಜನೆಯ ಮೂಲಕ ಟಿಸಿ ಅಳವಡಿಸಿಕೊಡಲು ಬೆಸ್ಕಾಂ ಸೆಕ್ಷನ್ ಆಫೀಸರ್ ಗಳು ರೈತರಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ರೈತರು, ಬೆಸ್ಕಾಂ ಎಇಇ ನಾಗರಾಜ್, ಸಂತೇಬೆನ್ಮೂರಿನ ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಎಲ್ಲಾ ಐದು ಜನ ಸೆಕ್ಷನ್ ಆಫೀಸರ್ ಗಳ ಕರೆಸಿ, ದೇವರ ಮುಂದೆ ರೈತರಿಂದ ಲಂಚ ಸ್ವೀಕರಿಸಲ್ಲ ಎಂಬ ಪ್ರಮಾಣ ಮಾಡಿಸಿದ್ದಾರೆ.
ಹಸು ಸಾಕಾಣಿಕೆ, ಎರೆಹುಳುಗೊಬ್ಬರ ತಯಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ