ದಾವಣಗೆರೆ: ಜಿಲ್ಲೆಯ ಚನ್ನಗಿರಿಯ ಸೂಳೆಕೆರೆ ಬಳಿ ಭದ್ರಾ ನಾಲೆಗೆ ಹೊಂದಿಕೊಂಡ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಭಾನುವಾರ ನಸುಕಿನಲ್ಲಿ ಉರುಳಿ ಬಿದ್ದ ಪರಿಣಾಮ, ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ದಾವಣಗೆರೆ ನಗರದ ಮಲ್ಲಿಕಾರ್ಜುನ್ (29) ಹಾಗೂ ಸಿದ್ದೇಶ್ (38) ಮೃತರು. ಕಾರಿನಲ್ಲಿದ್ದ ಇನ್ನೂ ನಾಲ್ವರು ಈಜಿಕೊಂಡು ನಾಲೆಯ ದಡ ಸೇರಿದ್ದಾರೆ. ಕಾರಿನಲ್ಲಿ ಆರು ಜನ ಸ್ನೇಹಿತರು ಮಂಗಳೂರು ಪ್ರವಾಸ ಮುಗಿಸಿಕೊಂಡು ಭಾನುವಾರ ರಾತ್ರಿ ದಾವಣಗೆರೆಗೆ ವಾಪಸ್ ಆಗುವಾಗ ಈ ಘಟನೆ ನಡೆದಿದೆ.
ಕಾರನ್ನು ಸ್ಥಳೀಯರು ನಾಲೆಯಿಂದ ಮೇಲಕ್ಕೆ ಎತ್ತಿದ್ದು, ಚಾಲಕನ ನಿದ್ದೆ ಮಂಪರಿನಿಂದ ಚಾಲನೆ ಮಾಡಿದ ಪರಿಣಾಮ ಅವಘಡ ಸಂಭವಿಸಿದೆ. ಭದ್ರಾ ನಾಲೆಗೆ ಹೊಂದಿಕೊಂಡ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ನಾಲೆಗೆ ಉರುಳಿದ ಕಾರಿನ ಬಾಗಿಲು ತೆರೆದು ನಾಲ್ವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಮಲ್ಲಿಕಾರ್ಜುನ್ ಮೃತದೇಹ ಹೊಸೂರು ಬಳಿ ಪತ್ತೆಯಾಗಿದೆ. ಸಿದ್ದೇಶ್ ಮೃತದೇಹಕ್ಕೆ ಹುಡುಕಾಟ ನಡೆದಿದೆ.



