ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ಮರವಂಜಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿ (Bear) ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಗ್ರಾಮದಿಂದ ತಾಂಡಕ್ಕೆ ಹೋಗುವ ರಸ್ತೆಯ ಶ್ರೀ ಈಶ್ವರ ದೇವಾಲಯ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ರಾತ್ರಿ ವೇಳೆ ಕರಡಿ ಸೆರೆಯಾಗಿದೆ. ಒಂದೂವರೆ ತಿಂಗಳಿಂದ ದೇವಾಲಯದ ಬಳಿ ಕರಡಿ ತಿರುಗಾಡುವುದನ್ನು ಗ್ರಾಮದ ಕೆಲವರಿಗೆ ಕಂಡಿತ್ತು. ಈ ಬಗ್ಗೆ ಚನ್ನಗಿರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ದಾವಣಗೆರೆ: ಅಡಿಕೆ ಧಾರಣೆ; ಸತತ ಕುಸಿತ ಬಳಿಕ ಭರ್ಜರಿ ಏರಿಕೆ – ಮಾ.21ರ ದರ ಎಷ್ಟಿದೆ..?
ಕೂಡಲೇ ಕಾರ್ಯಪ್ರವೃತ್ತರಾದ ವಲಯ ಅರಣ್ಯಾಧಿಕಾರಿ ಶ್ವೇತಾ ಅವರು ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ಕರಡಿ ತಿರುಗಾಡುತ್ತಿದ್ದ ಪ್ರದೇಶದ ಆಯಟ್ಟಿನ ಪ್ರದೇಶದಲ್ಲಿ ಬೋನು ಅಳವಡಿಸಿದ್ದರು. ಗುರುವಾರ ರಾತ್ರಿ 11 ಗಂಟೆ ಸಮಯದಲ್ಲಿ 6 ವರ್ಷದ ಕರಡಿ ಸೆರೆಸಿಕ್ಕಿದೆ. ಈ ಕರಡಿಯನ್ನು ಸುರಕ್ಷಿತವಾದ ದಟ್ಟಅರಣ್ಯಕ್ಕೆ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕರಡಿಯ ಸೆರೆಯಿಂದ ಗ್ರಾಮದ ಜನರಲ್ಲಿ ಆತಂಕ ದೂರವಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.ಕರಡಿ ಕಾರ್ಯಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಷಜಿಯಾ ಖಾನಂ, ಜಗದೀಶ್, ಪ್ರವೀಣ್ ಮೊಕಾಶಿ, ನಿಂಗಪ್ಪ, ಬಸವನಗೌಡ, ರಂಗಪ್ಪ, ಬಸವರಾಜ್, ದೀಪಕ್, ಪ್ರಭು, ಮೆಹಬೂಬ್, ಸುಭಾನ್, ದೇವಪ್ಪ ಹಾಜರಿದ್ದರು.