ದಾವಣಗೆರೆ: ಮಹಾನಗರ ಪಾಲಿಕೆಯ ಉಪ ಚುನಾವಣೆಯ ವಾರ್ಡ್ ನಂ. 20ರಲ್ಲಿ ಭಾರತ್ ಕಾಲೋನಿಯ ಬಿಜೆಪಿ ಅಭ್ಯರ್ಥಿ ರೇಣುಕಾ ಎಂ ಕೃಷ್ಣ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಲಾಯಿತು.
ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಹಿರಿಯ ಮುಖಂಡ ದೇವರಮನೆ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸ್ ಕರಿಯಪ್ಪ, ಮಂಡಲದ ಅಧ್ಯಕ್ಷ ಆನಂದರಾವ್ ಶಿಂಧೆ ಅವರ ನೇತೃತ್ವದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ದೂಡಾ ಸದಸ್ಯೆ ದೇವಿರಮ್ಮ, ಮಹಾನಗರ ಪಾಲಿಕೆ ಸದಸ್ಯರುಗಳಾದ ಸೋಗಿ ಶಾಂತಕುಮಾರ್ ರವರು, ಎಲ್.ಡಿ. ಗೋಣೆಪ್ಪ , ಸೌಮ್ಯ ನರೇಂದ್ರ ಕುಮಾರ್ , ಗಾಯಿತ್ರಮ್ಮ, ಶಿವಪ್ರಕಾಶ್, ರಾಕೇಶ್ ಜಾಧವ್, ಶಿವನಗೌಡ ಪಾಟೀಲ್, ತರಕಾರಿ ಶಿವಣ್ಣ, ಮಹಿಳಾ ಪ್ರಧಾನ ಕಾರ್ಯದರ್ಶಿ ಸಾವಿತ್ರ, ಮಂಡಲದ ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಮ್ಮ, ಮಂಡಲ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ, ಮಂಡಲದ ಯುವ ಮೋರ್ಚಾ ಅಧ್ಯಕ್ಷ ರಾಕೇಶ್, ಜಿಲ್ಲಾ ಕಾರ್ಯದರ್ಶಿ ಗೋಪಾಲರಾವ್ ಮಾನೆ, ಆಶ್ರಯ ಸಮಿತಿ ಸದಸ್ಯರಾದ ಆನಂದ್ ಹಿರೇಮಠ, ಮಂಡಲದ ಎಸ್ ಸಿ ಮೋರ್ಚಾ ಅಧ್ಯಕ್ಷ ಅಂಜನಪ್ಪ ಶಾಮನೂರು, ಬಿಬಿಸಿ ಮೋರ್ಚಾ ಅಧ್ಯಕ್ಷರಾದ ನಿಂಗೋಜಿ ರಾವ್, ಬಿಜೆಪಿ ಮುಖಂಡರುಗಳಾದ ಟಿಂಕರ್ ಮಂಜಣ್ಣನವರು, ಸೋಗಿ ಗುರುಶಾಂತ್ ರವರು, ಬಾಲಚಂದ್ರ ಶೆಟ್ಟಿ , ಕಿಶೋರ್, ಶಿವಾನಂದ, ಗಣೇಶ್ , ಪ್ರಕಾಶ್, ಭಾಗ್ಯಮ್ಮ ಪಿಸಾಳೆ, ಸುಮಾ ಮಲ್ಲಿಕಾರ್ಜುನಯ್ಯ, ಡಿ.ಎಲ್. ರಾಮಚಂದ್ರಪ್ಪ, ಕೃಷ್ಣರವರು, ಗೋವಿಂದ್, ಶಂಕರಗೌಡ ಬಿರಾದಾರ್, ನವೀನ್ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.



