ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗೆ ಮೊದಲ ಆದ್ಯತೆ ಶಾಮನೂರು ಕುಟುಂಬಕ್ಕೆ ಸಹಜವಾಗಿಯೇ ಇರುತ್ತದೆ. ಒಂದು ವೇಳೆ ನಮ್ಮ ಅಣ್ಣನಿಗೆ (ಶ್ರೀನಿವಾಸ ಶಿವಗಂಗಾ) ಟಿಕೆಟ್ ಕೊಟ್ಟರೆ ತಪ್ಪಿಲ್ಲ. ಪಕ್ಷಕ್ಕೆ ನಿರಂತರ ಸೇವೆ ಸಲ್ಲಿಸಿಕೊಂಡು ಬಂದಿರುವ ಅಣ್ಣನಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಖಂಡಿತಾ ನಾನು ಚುನಾವಣೆ ಯನ್ನು ಮಾಡುತ್ತೇನೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.
ದಾವಣಗೆರೆ; ಫೆ.24,25 ರಂದು ನಗರ ದೇವತೆ ದುಗ್ಗಮ್ಮ ಜಾತ್ರೆ; ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಮೊದಲ ಆದ್ಯತೆ ನೀಡಬೇಕು. ಪಕ್ಷದಲ್ಲಿ ಸಾಮಾನ್ಯ ಸಂಪ್ರದಾಯದಂತೆ ಯಾವ ಕುಟುಂಬದಲ್ಲಿ ಸಾವು ಸಂಭವಿಸಿರುತ್ತದೋ, ಆ ಕುಟುಂಬದವರಿಗೇ ಟಿಕೆಟ್ ನೀಡಲಾಗುತ್ತಿದೆ.ಅದರಂತೆ ಶಾಮನೂರು ಕುಟುಂಬಕ್ಕೆ ಮೊದಲ ಆದ್ಯತೆ ಇರಲಿ. ಹೈಕಮಾಂಡ್ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಕೆಲಸ ಮಾಡುತ್ತೇವೆ ಎಂದರು.
ದಾವಣಗೆರೆ: ಜಿಲ್ಲೆಗೆ ಎರಡು ಶ್ರಮಿಕ ವಸತಿ ಶಾಲೆ ಮಂಜೂರು
ಒಂದು ವೇಳೆ ದಾವಣಗೆರೆ ದಕ್ಷಿಣ ಟಿಕೆಟ್ ವಿಚಾರದಲ್ಲಿ ಬದಲಾವಣೆ ಮಾಡಿದರೆ ನಮ್ಮ ಸಹೋದರನಿಗೆ ಟಿಕೆಟ್ ನೀಡಲಿ. ನಮ್ಮ ಸಹೋದರನಿಗೆ ಟಿಕೆಟ್ ನೀಡಿದರೆ ನಾನು ಚುನಾವಣೆ ಮಾಡುತ್ತೇನೆ ಎಂದು ತಿಳಿಸಿದರು.
ಸಿಎಂ ಕುರ್ಚಿ ವಿಚಾರ ಮುಖ್ಯಮಂತ್ರಿ ಕುರ್ಚಿ ವಿಚಾರದ ನಾನು ಈಗ ಮಾತನಾಡುವುದಿಲ್ಲ. ಜ.14ಕ್ಕೆ ಸಂಕ್ರಾಂತಿ ಇದೆ. ಸಂಕ್ರಾಂತಿಗೆ ಇನ್ನೂ 8-10 ದಿನಗಳು ಬಾಕಿ ಇವೆ.ಹಾಗಾಗಿ ಜ.16ರಂದು ಚರ್ಚೆಮಾಡೋಣ ಎಂದರು.



