ದಾವಣಗೆರೆ: ಎರಡು ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾದ ಘಟನೆ ಇಂದು ಬೆಳಗ್ಗೆ ನ್ಯಾಮತಿ ತಾಲೂಕಿನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ತಾಲ್ಲೂಕಿನ ಉಪ್ಪಿನಹಳ್ಳ ಸಮೀಪ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಓವರ್ ಟೇಕ್ ಮಾಡಲು ಹೋದಾಗ ಈ ಅವಘಡ ನಡೆದಿದೆ. ಶಿವಮೊಗ್ಗದಿಂದ ಹೊನ್ನಾಳಿಯ ಕಡೆಗೆ ಬರುತ್ತಿದ್ದ ವೆಂಕಟೇಶ್ವರ ಬಸ್, ಗುರುರಾಜ್ ಬಸ್ ಗೆ ಡಿಕ್ಕಿ ಹೊಡೆದೆ. ಇದರಿಂದ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದಿದ್ದು, ಬಸ್ ಮುಂದಿನ ಭಾಗಕ್ಕೆ ಹಾನಿಯಾಗಿದೆ. ಬಸ್ ನಲ್ಲಿದ್ದ ಬಹುತೇಕರಿಗೆ ಸಣ್ಣ –ಪುಟ್ಟ ಗಾಯಗಳಾಗಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡವರನ್ನು ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.



