ದಾವಣಗೆರೆ: ಈ ಬಾರಿಯ ಸಂಕ್ರಾಂತಿ ಮಧ್ಯೆ ಕರ್ನಾಟಕ ದಾವಣಗೆರೆ ಜನರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಇಂದು ಬೆಳ್ಳಂಬೆಳಗ್ಗೆ ಬೆಣ್ಣೆ ನಗರಿ ಜನರು ಕಣ್ಣು ಬಿಡುವಷ್ಟರಲ್ಲಿ ಸೂತಕದ ಸುದ್ದಿಯೊಂದು ಬರ ಸಿಡಿಲಿನಂತೆ ಅಪ್ಪಳಿಸಿತ್ತು.
ನಿನ್ನೆಯಷ್ಟೇ ಎಲ್ಲರೂ ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದ್ದರು. ತುಂಬಾ ದಿನದ ನಂತರ ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ಯಾಕೆ ಒಂದು ದಿನದ ಟ್ರಿಪ್ ಹೋಗಬಾರು ಎಂದುಕೊಂಡವರು, ಬೆಳ್ಳಂಬೆಳಗ್ಗೆ ಗೋವಾಕ್ಕೆ ಹೋರಟೇ ಬಿಟ್ಟರು. ಒಂದೇ ಶಾಲೆಯಲ್ಲಿ ಓದಿದ್ದ 16 ಮಂದಿ ಮಹಿಳೆಯರು ಒಂದು ದಿನದ ಟ್ರಿಪ್ ಗೆ ಹೋಗಿದ್ದರು. ಎಲ್ಲರು ಒಟ್ಟಾಗಿ ಸೇರಿ ಗೋ ಗೋವಾ ಎಂದು ಎಂದು ಕೊನೆಯದಾಗಿ ಸೆಲ್ಫಿಯೊಂದನ್ನು ತೆಗೆದು ಸೋಷಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿ, ಮಿನಿ ಬಸ್ ಹತ್ತಿದ್ದರು. ಖುಷಿ ಖುಷಿಯಾಗಿ ದಾವಣಗೆರೆಯಿಂದ ಧಾರವಾಡಕ್ಕೆ ಹೋಗುವಷ್ಟರಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದರು. ಆದರೆ, ಯಮರೂಪಿಯಾಗಿ ಬಂದ ಟಿಪ್ಪರೊಂದು ಎಲ್ಲರ ಖುಷಿಯನ್ನು ಕ್ಷಣ ಮಾತ್ರದಲ್ಲಿ ಕಿತ್ತು ಕೊಂಡಿದೆ.

ಧಾರವಾಡ ಹೊರವಲಯದ ಇಟಿಗಟ್ಟಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಿನ ಜಾವ ಟೆಂಫೋ ಟ್ರಾವೆಲರ್ ಟಿಪ್ಪರ್ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 11 ಮಂದಿ ಮೃತಪಟ್ಟು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಿನಜಾವ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲರೂ ದಾವಣಗೆರೆಯ ವಿದ್ಯಾನಗರ ನಿವಾಸಿಗಳಾಗಿದ್ದರು. ಎಲ್ಲರೂ ಸ್ಕೂಲ್ ನ ಒಂದೇ ಬ್ಯಾಚ್ ನ ಸ್ನೇಹಿತರಾಗಿದ್ದರು. ಮಾಜಿ ಶಾಸಕ ಗುರುಸಿದ್ಧನಗೌಡ ಸೊಸೆ, ಸ್ತೀ ರೋಗ ತಜ್ಞೆ ವೀಣಾ ಪ್ರಕಾಶ್ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 18 ಮಂದಿ ಪ್ರಯಾಣ ಬೆಳೆಸಿದ್ದು, ಅದರಲ್ಲಿ 16 ಮಂದಿ ಮಹಿಳೆಯರೇ ಆಗಿದ್ದಾರೆ. ಈ ಘಟನೆಯಲ್ಲಿ 10 ಮಂದಿ ಮಹಿಳೆಯರು ಮೃತಪಟ್ಟಿದ್ದು, ಮೂರು ಮಂದಿ ಪುರುಷರು ಸಾವನ್ನಪ್ಪಿದ್ದಾರೆ.

ಟ್ವಿಟ್ ಮೂಲಕ ಸಂತಾಪ ಸೂ ಸೂಚಿಸಿದ ಪ್ರಧಾನಿ, ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದಿದ್ದಾರೆ

ಸಂಸದರ ಸಂತಾಪ: ರಸ್ತೆ ಅಪಘಾತದಿಂದಾಗಿ ಉಂಟಾಗಿರುವ ಪ್ರಾಣಹಾನಿ ಅತ್ಯಂತ ನೋವಿನ ಸಂಗತಿ. ಈ ದುಃಖದ ಸಮಯದಲ್ಲಿ ಕುಟುಂಬಗಳೊಂದಿಗೆ ನಾವು ಸದಾ ಇದ್ದೇವೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.



