Connect with us

Dvgsuddi Kannada | online news portal | Kannada news online

ದಾವಣಗೆರೆ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶ; ನಾಳೆ ಯುವ ಮೋರ್ಚಾದಿಂದ ಬೃಹತ್ ಬೈಕ್ ರ‍್ಯಾಲಿ

ಪ್ರಮುಖ ಸುದ್ದಿ

ದಾವಣಗೆರೆ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶ; ನಾಳೆ ಯುವ ಮೋರ್ಚಾದಿಂದ ಬೃಹತ್ ಬೈಕ್ ರ‍್ಯಾಲಿ

ದಾವಣಗೆರೆ: ರಾಜ್ಯದ ನಾಲ್ಕು ದಿಕ್ಕಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮಾ.25 ರಂದು ಮಹಾಸಂಗಮ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆ (ಮಾ.20) ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು, ಸುಮಾರು 10 ಲಕ್ಷಕ್ಕಿಂತ
ಹೆಚ್ಚಿನ ಜನರ ಸೇರಲಿದ್ದಾರೆ‌. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹೀಗಾಗಿ 25-03-2023ರ ಶನಿವಾರದಂದು ನಡೆಯುವ ಮಹಾಸಂಗಮ ಸಮಾವೇಶದ ದೃಷ್ಟಿಯಿಂದ ದಾವಣಗೆರೆ ಜಿಲ್ಲಾ ಬಿಜೆಪಿ ಯುವಮೋರ್ಚಾದ ವತಿಯಿಂದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆರ್‌.ಎಲ್. ಶಿವಪ್ರಕಾಶ್‌ ನೇತೃತ್ವದಲ್ಲಿ ನಾಳೆ (ಮಾ.20) ಸಂಜೆ 4 ಗಂಟೆಗೆ ದಾವಣಗೆರೆ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿಯನ್ನು ಏರ್ಪಡಿಸಲಾಗಿದೆ.

ಈ ರ‍್ಯಾಲಿಯನ್ನು ಸಂಸದ ಜಿ.ಎಂ. ಸಿದ್ಧೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಚಾಲನೆ ನೀಡಲಿದ್ದು, ಬಿಜೆಪಿ ಪಕ್ಷದ ಎಲ್ಲಾ ಮಂಡಲದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. 2000 ಕ್ಕಿಂತ ಹೆಚ್ಚಿನ ಬೈಕ್‌ಗಳಲ್ಲಿ ಭಾಗವಹಿಸಲಿದ್ದು, ರ‍್ಯಾಲಿಯು ನಗರದ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾಗಿ ಬಂಬೂಬಜಾರ್ ರಸ್ತೆಯ ಮೂಲಕ ಎಪಿಎಂಸಿ ಫ್ಲೈಓವರ್‌ನೊಂದಿಗೆ, ನಗರದ ಹಳೆ ಪಿ.ಬಿ. ರಸ್ತೆಯಲ್ಲಿ ಸಂಚರಿಸಿ ಸಮಾವೇಶ ನಡೆಯುವ ಜಿಎಂಐಟಿ ಕಾಲೇಜಿನ ಪಕ್ಕದಲ್ಲಿ ನಡೆಯುವ ಸಮಾವೇಶದ ಜಾಗದಲ್ಲಿ ಕೊನೆಗೊಳ್ಳುತ್ತದೆ. ಈ ಬೈಕ್ ರ‍್ಯಾಲಿಗೆಸಾರ್ವಜನಿಕರು ಬಿಜೆಪಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಬೈಕ್ ರ‍್ಯಾಲಿಯನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ‌.

ಬೈಕ್ ರ‍್ಯಾಲಿ ಸಾಗುವ ಮಾರ್ಗ : ವೆಂಕಟೇಶ್ವರ ಸರ್ಕಲ್ ನಿಂದ ಪ್ರಾರಂಭಿಸಿ, ಬಂಬೂ ಬಜಾರ್ ರಸ್ತೆ, ಎ.ಪಿ.ಎಂ.ಸಿ ರಸ್ತೆಯ ಫ್ಲೈ ಓವರ್, ಹಳೇ ಪಿ.ಬಿ. ರಸ್ತೆ, ಗಾಂಧಿ ಸರ್ಕಲ್, ರೇಣುಕಾಮಂದಿರ, ಎ.ವಿ.ಕೆ. ಕಾಲೇಜ್ ರಸ್ತೆ, ಗುಂಡಿ ಸರ್ಕಲ್, ವಿದ್ಯಾನಗರ, ಬಿ.ಐ.ಇ.ಟಿ. ಕಾಲೇಜ್ ರಸ್ತೆ, ಲಕ್ಷ್ಮೀಫ್ಲೋರ್‌ ಮಿಲ್, ರಿಂಗ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಪಿ.ಬಿ. ರಸ್ತೆಯ ಮೂಲಕ ತೆರಳಿ ಜಿ.ಎಂ.ಐ.ಟಿ. ಕಾಲೇಜಿನ ಪಕ್ಕದಲ್ಲಿರುವ ಸಮಾವೇಶ ನಡೆಯುವ ಆವರಣದಲ್ಲಿ ಮುಕ್ತಾಯಗೊಳಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • ಪ್ರಮುಖ ಸುದ್ದಿ

    ಶನಿವಾರ ರಾಶಿ ಭವಿಷ್ಯ 18 ಜನವರಿ 2025

    By

    ಈ ರಾಶಿಯವರಿಗೆ ಶಶಿ ಮಂಗಳ ಯೋಗದಿಂದ ಗುಡ್ ನ್ಯೂಸ್, ಶನಿವಾರ ರಾಶಿ ಭವಿಷ್ಯ 18 ಜನವರಿ 2025 – ಸೂರ್ಯೋದಯ –...

  • ಪ್ರಮುಖ ಸುದ್ದಿ

    ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?

    By

    ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)...

  • ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 17 ಜನವರಿ 2025

    By

    ಈ ರಾಶಿಯವರು ಭೂ ವ್ಯವಹಾರಗಳಿಗೆ ಹೂಡಿಕೆ ಮಾಡುವರು, ಈ ರಾಶಿಯವರ ಅಧಿಕಾರಿಗಳು ಕಾರ್ಯ ಕ್ಷೇತ್ರದಲ್ಲಿ ಅಡ್ಡಿ ಆತಂಕಗಳೇ ಹೆಚ್ಚು, ಶುಕ್ರವಾರದ ರಾಶಿ...

  • ಪ್ರಮುಖ ಸುದ್ದಿ

    ರಾಶಿ ಭವಿಷ್ಯ ಗುರುವಾರ 16 ಜನವರಿ 2025

    By

    ಈ ರಾಶಿಯ ಗುತ್ತಿಗೆದಾರ ವ್ಯವಹಾರಸ್ತರಿಗೆ ಹಾಗೂ ಮಧ್ಯವರ್ತಿಗಳಿಗೆ ಧನ ಆಗಮನ, ಈ ರಾಶಿಯ ಅವಿವಾಹಿತರಿಗೆ ಮದುವೆ ಯೋಗ, ರಾಶಿ ಭವಿಷ್ಯ ಗುರುವಾರ...

  • ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

To Top