ದಾವಣಗೆರೆ: ರಾಜ್ಯಮಟ್ಟದ ಭಜನಾ ಸ್ಪರ್ಧೆ; ಪ್ರಥಮ ಬಹುಜಮಾನ 50 ಸಾವಿರ ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಡಾ. ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ನಗರದ  ಶ್ರೀ ವೀರೇಶ್ವರ ಪುಣ್ಯಾಶ್ರಮದದಲ್ಲಿ ಫೆ 2 ರಿಂದ ಮಾ.3 ರವರೆಗೆ ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಹೆಚ್.ಶಿವಮೂರ್ತಿ ಸ್ವಾಮೀಜಿ, ನಗರದ ಬಾಡಾ ಕ್ರಾಸ್ ರಸ್ತೆಯಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಆಶ್ರಯದಲ್ಲಿ ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ.  ಪುಣ್ಯಾಶ್ರಮದ ಆವರಣದಲ್ಲಿರುವ ಶಿಲಾ ಮಂಟಪದ ಧ್ಯಾನ ಮಂದಿರ ಲೋಕಾರ್ಪಣಾ ಕಾರ್ಯಕ್ರಮ ಹಾಗೂ 2022 ರ ಫೆ.2 ರಂದು ಕೀರ್ತಿಶೇಷ ಪಂಚಾಕ್ಷರಿ ಗವಾಯಿಗಳ ಹುಟ್ಟುಹಬ್ಬ ನಡೆಯಲಿದೆ.  ಮಾರ್ಚ್ 3  ರಂದು ಡಾ. ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾದೆ ಎಂದು ಮಾಹಿತಿ ನೀಡಿದರು.

ನಾಡಿನ  ಆಧ್ಯಾತ್ಮ ಭಜನಾ ಪರಂಪರೆಯನ್ನು ಪುನರುತ್ಥಾನಗೊಳಿಸುವ ದೆಸೆಯಲ್ಲಿ ಹಾಗೂ ಅವಕಾಶ ವಂಚಿತ ಭಜನಾ ಕಲಾವಿದರಿಗೆ ಸೂಕ್ತವಾದ ಅವಕಾಶ, ವೇದಿಕೆ ಕಲ್ಪಿಸುವ ಸುದ್ದೇಶದಿಂದ ಸ್ಪರ್ಧೆ ಾಯೋಜಿಸಲಾಗಿದೆ. ಭಾಗವಹಿಸುವ ಭಜನಾ ತಂಡಗಳಿಗೆ ನಗದು ಪುರಸ್ಕಾರ, ಸ್ಮರಣಿಕೆ, ಪ್ರಮಾಣಪತ್ರ ವಿತರಿಸಲಾಗುವುದು ಎಂದರು.

  • ನಿಯಮಗಳು
  • ಪ್ರತಿ  ತಂಡದಲ್ಲಿ ಕನಿಷ್ಟ ಆರು ಜನ ಗರಿಷ್ಟ ಹತ್ತು ಜನ ಕಲಾವಿದರು
  • ಹಾರ್ಮೋನಿಯಂ, ತಬಲಾ, ತಾಳ, ಶೃತಿ ಪೆಟ್ಟಿಗೆ ಇನ್ನಿತರ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು
  •  ಪ್ರತಿ ತಂಡಕ್ಕೆ ಹಾಡಲು 30 ನಿಮಿಷ ಕಾಲಾವಕಾಶ
  • ಸ್ಪರ್ಧಿಗಳ ತಂಡ ಪಂಚಾಕ್ಷರಿ ಗವಾಯಿಗಳ, ಪುಟ್ಟರಾಜ ಗವಾಯಿಗಳ ತತ್ವಪದ ಕನಿಷ್ಟ ಎರಡು ಹಾಡು ನಂತರ ಸಂತ ಶಿಶುನಾಳ ಶರೀಫರ, ಗುರುಗೋವಿಂದಭಟ್ಟರ, ಶ್ರೀ ಬಸವಣ್ಣನವರ, ಅಕ್ಕಮಹಾದೇವಿ ವಚನಗಳನ್ನು, ಕನಕದಾಸರ, ಪುರಂದರದಾಸರ ಪದಗಳನ್ನು ಹಾಡಬಹುದು
  • ಪ್ರಥಮ ಬಹುಮಾನ 50,000
  •   ದ್ವಿತೀಯ ಬಹುಮಾನ  40,000
  •  ತೃತೀಯ ಬಹುಮಾನ  30,000
  • ನಾಲ್ಕನೇ ಬಹುಮಾನ 25,000
  •  ಐದನೇ ಬಹುಮಾನ 20,000
  •  ಆರನೇ ಬಹುಮಾನ 15,000
  •  ಏಳನೇ ಬಹುಮಾನ  10,000
  • 8ನೇ ಬಹುಮಾನ 5,000 ಹಾಗೂ  ಸಮಾಧಾನಕರ ಬಹುಮಾನ 10 ತಂಡಗಳಿಗೆ ತಲಾ ಮೂರು ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಲಾಗುವುದು

ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವವರು 500 ಕೊಟ್ಟು ರಶೀದಿ ಪಡೆದು ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 6360058926, 9480176601, 9538732777 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ. ಈ ಸಂದರ್ಭದಲ್ಲಿ  ಸಾಲಿಗ್ರಾಮ ಗಣೇಶ್‌ಶೆಣೈ, .ಎ.ಕೊಟ್ರಪ್ಪ ಕಿತ್ತೂರು  ಜಿ.ಎನ್.ಕರಿಬಸಪ್ಪ ಜಾಲಿಮರ ಉಪಸ್ಥಿತರಿದ್ದರು.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *