ಭದ್ರಾವತಿ: ಭದ್ರಾ ಜಲಾಶಯ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಳವಾಗಿದೆ. ಇದರಿಂದ ಇಂದಿನ ನೀರಿನ ಮಟ್ಟ 171.3 ಅಡಿಗೆ ಏರಿಕೆಯಾಗಿದೆ.
ಇಂದು (ಜು.10) 31,989 ಕ್ಯೂಸೆಕ್ ಒಳಹರಿವಿದ್ದು, ನಿನ್ನೆ 28, 016 ಕ್ಯೂಸೆಕ್ ಒಳ ಹರಿವಿತ್ತು. ಇಂದು ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 171.3 ಅಡಿಗೆ ತಲುಪಿದೆ. ಇದೀಗ ಜು.09ರ ವೇಳೆಗೆ 168.8 ಅಡಿ ತಲುಪಿದೆ. ಉದರಿಂದ ಡ್ಯಾಂ ಭರ್ತಿಗೆ ಇನ್ನು 15 ಅಡಿ ಮಾತ್ರ ಬಾಕಿ ಉಳಿದಿದೆ.
- ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 161.3 ಅಡಿ
- ಪೂರ್ಣ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 54.233 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 31,989 ಕ್ಯೂಸೆಕ್
- ಒಟ್ಟು ಹೊರಹರಿವು: 149 ಕ್ಯೂಸೆಕ್
- ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
- ಎಡದಂಡೆ ನಾಲೆ: 0.00ಕ್ಯೂಸೆಕ್ಸ್
- ಕಳೆದ ವರ್ಷ ಈ ದಿನ : 155.10 ಅಡಿ