ದಾವಣಗೆರೆ: ಭದ್ರಾ ಅಚ್ಚುಕಟ್ಟು ಕೊನೆ ಭಾಗದ ಮಲೇಬೆನ್ನೂರಿನ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಸಕ ರೇಣುಕಾಚಾರ್ಯ ಅವರು ಕಚೇರಿಯನ್ನು ಹೊನ್ನಾಳಿಗೆ ಸ್ಥಳಾಂತರಗೊಳಿಸಲು ಮುಂದಾಗಿದ್ದಾರೆಂದು ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡ ದೂರಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ, ಬಸವಾಪಟ್ಟಣ ಉಪವಿಭಾಗ ಕಚೇರಿಯನ್ನು ಹೊನ್ನಾಳಿ ತಾಲ್ಲೂಕಿನ ಸಾಸ್ವೇಹಳ್ಳಿಗೆ ಹಾಗೂ ಮಲೇಬೆನ್ನೂರು ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ಹೊನ್ನಾಳಿಗೆ ಸ್ಥಳಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ಮಾಡಿದ್ದಾರೆ. ಇದರಿಂದ ಕೊನೆ ಭಾಗದ ರೈತರಿಗೆ ಅನಾನುಕೂಲವಾಗಲಿದೆ ಕಿಡಿಕಾರಿದರು.
ಮಲೇಬೆನ್ನೂರು ಹಾಗೂ ಬಸವಾಪಟ್ಟಣದ ಕಚೇರಿಗಳು ಸುಮಾರು 60 ವರ್ಷದಿಂದ ಕಾರ್ಯನಿರ್ವಹಣೆ ಮಾಡುತ್ತಿವೆ. ಮಲೇಬೆನ್ನೂರು ಶಾಖಾ ನಾಲೆ 23734 ಹೆಕ್ಟೇರ್ , ಆನ್ವೇರಿ ಶಾಖಾ ನಾಲೆ 6319 ಹೆಕ್ಟೇರ್ ಮತ್ತು ಟಿ.ಬಿ. ಕೆರೆ ಪಿಕಪ್ ಯೋಜನೆಯ 4280 ಹೆಕ್ಟೇರ್ ಅಚ್ಚುಕಟ್ಟು ಒಟ್ಟು 34373 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದದೆ. ಇದರಲ್ಲಿ ಹೊನ್ನಾಳ ತಾಲ್ಲೂಕು 8842 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವು ಬರುತ್ತದೆ . ಕೊನೆಯ ಭಾಗದ ಸುಮಾರು 20-25 ಹಳ್ಳಿಗಳು ಬರುತ್ತಿದ್ದು , ರೈತರುಗಳು ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಮಯಕ್ಕೆ ಸರಿಯಾಗಿ ಕಚೇರಿಗೆ ಭೇಟಿ ನೀಡಲು ಈ ವಿಭಾಗ ಕಚೇರಿ ಮತ್ತು ಬಸವಾಪಟ್ಟಣ ಉಪವಿಭಾಗ ಕಛೇರಿ ಹತ್ತಿರವಾಗಿರುತ್ತದೆ.ಜಿಲ್ಲಾಧಿಕಾರಿಗಳ ಕಛೇರಿಯು ಕೇವಲ 30 ಕಿ.ಮೀ ಆಗುತ್ತದೆ ಎಂದರು.
ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಂಡಲ್ಲಿ ರೈತರು ಮತ್ತು ನೀರು ಬಳಕೆದಾರರ ಸಹಕರ ಸಂಘಗಳು ಹೋರಾಟಕ್ಕಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬಿ.ಜಿ ನಾಗರಾಜ್,ದೇವೇಂದ್ರಪ್ಪ,ಎ.ಬಿ ಕರಿಯಪ್ಪ,ಬಿ.ಜಿ ವಿಶ್ವಾಂಬರ ಉಪಸ್ಥಿತರಿದ್ದರು.