ದಾವಣಗೆರೆ: ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನೀರು ಬಿಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹರಿಹರ ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಂಪ್ರದಾಯದಂತೆ ನೀರಾವರಿ ಸಲಹಾ ಸಮಿತಿ ಸಭೆ ಯಾವಾಗ ನಡೆಯುತ್ತದೆ, ನೀರು ಯಾವಾಗ ಹರಿಸುತ್ತೀರಿ ಎಂದು ನನ್ನ ಕ್ಷೇತ್ರದ ಜನರುಪ್ರಶ್ನಿಸುತ್ತಿದ್ದಾರೆ. ಆಗಸ್ಟ್ 10ರಂದು ಜಲಾಶಯದಿಂದ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಆದರೆ, ಇದುವರೆಗೂ ನೀರಾವರಿ ಇಲಾಖೆಯು ಅಧಿಕೃತ ದಿನಾಂಕ ಘೋಷಿಸಿಲ್ಲ ಎಂದರು.



