ದಾವಣಗೆರೆ: ಭದ್ರಾ ಜಲಾಶಯದ ಕೊನೆ ಭಾಗಕ್ಕೆ ನೀರು ತಲುಪದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆಂಬ ದೂರು ದೂರು ಬಂದ ಹಿನ್ನೆಲೆ ನಾಲೆಗೆ ಅಕ್ರಮವಾಗಿ ಅಳವಡಿಸಿದ್ದ 30 ಪಂಪ್‌ಸೆಟ್‌ಗಳನ್ನು ಮಲೇಬೆನ್ನೂರು ವಿಭಾಗದ ಬೆಸ್ಕಾಂ, ಪೊಲೀಸ್, ಕಂದಾಯ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಚನ್ನಗಿರಿ, ಹೊನ್ನಾಳಿ ತಾಲ್ಲೂಕಿನ ಗಡಿಯವರೆಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ನೇರವಾಗಿ ಭದ್ರಾ ನಾಲೆಗೆ ಪಂಪ್‌ಸೆಟ್ ಅಳವಡಿಸಿರುವುದರಿಂದ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ದೊರೆತಯತ್ತಿಲ್ಲ ಎಂದು ರೈತರ ದೂರಿದ್ದರು. ತೋಟದ ಬೆಳೆಗಳು ನೀರಿಲ್ಲದೇ ಒಣಗುತ್ತಿರುವುದರಿಂದ ಹಾಯಿಸಿಕೊಳ್ಳುತ್ತಿದ್ದೇವೆಂದ ರೈತರು ಹೇಳಿದರು. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ, ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಬಾರದು ಎಂದು ನೀರಾವರಿ ಇಲಾಖೆಯ ಮಲೇಬೆನ್ನೂರು ವಿಭಾಗದ ಇಂಜಿನಿಯರ್ ರೈತರಿಗೆ ಸೂಚಿಸಿದರು.
ಬೆಸ್ಕಾಂ ಶಾಖಾಧಿಕಾರಿ ನಾಗರಾಜನಾಯ್ಕ್, ಎಸ್‌ಐ ಎಚ್.ಕೆ. ವೀಣಾ, ಕಂದಾಯ ನಿರೀಕ್ಷಕ ಎಸ್.ಎನ್. ಬಸಣ್ಣ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಭಾಗವಹಿಸಿದ್ದರು.



