ದಾವಣಗೆರೆ: ಜಿಲ್ಲೆಯ ಹರಿಹರ 220/66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸಹಮ್ಮಿಕೊಂಡಿರುವುದರಿಂದ ತಾಲ್ಲೂಕಿನ ವಿವಿಧೆಡೆ ಜು.21 ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ..?
ನಂದಿಗುಡಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ನಂದಿಗುಡಿ, ವಾಸನ, ಕಡಾರನಾಯಕನಹಳ್ಳಿ, ಕೊಕ್ಕನೂರು, ಮೂಗಿನಗೊಂದಿ, ಜಿ.ಟಿ.ಕಟ್ಟೆ, ಗೋವಿನಹಾಳು, ಹಿಂಡಸಘಟ್ಟ, ಎಳೆಹೊಳೆ, ಮರಳಹಳ್ಳಿ, ಇಂಗಳಗೊಂದಿ, ಹುಲಿಗಿನಹೊಳೆ, ಉಕ್ಕಡಗಾತ್ರಿ ಮತ್ತು ಸುತ್ತಲಿನ ಪ್ರದೇಶಗಳು.
ದೇವರಬೆಳಕೆರೆ ವಿದ್ಯುತ್ ವಿತರಣಾಕೇಂದ್ರ ವ್ಯಾಪ್ತಿಯ ದೇವರಬೆಳಕೆರೆ, ಕಡ್ಲೆಗೊಂದಿ, ಸತ್ಯನಾರಾಯಣ ಕ್ಯಾಂಪ್, ಸಾಲಕಟ್ಟೆ, ಮಿಟ್ಲಕಟ್ಟೆ ಐಪಿ ವಲಯ ಮತ್ತು ಸುತ್ತಲಿನ ಪ್ರದೇಶಗಳು.
ಮಲೆಬೆನ್ನೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಒಡೆಯರಬಸಾಪುರ, ಜಿ.ಬೇವಿನಹಳ್ಳಿ, ಹಳ್ಳಿಹಾಳು, ಕಂಬತ್ತನಹಳ್ಳಿ, ಮಲೆಬೆನ್ನೂರು, ಹಾಲಿವಾಣ, ದಿಬ್ಬದಹಳ್ಳಿ, ಹರಳಹಳ್ಳಿ, ಕೊಮಾರನಹಳ್ಳಿ, ಕೊಪ್ಪ,ಎಫ್-2 ಮಲೆಬೆನ್ನೂರು, ದಿಬ್ಬದಹಳ್ಳಿ, ಹರಳಹಳ್ಳಿ, ಹಾಲಿವಾಣ, ಕೊಪ್ಪ ಮತ್ತು ಸುತ್ತಲಿನ ಪ್ರದೇಶಗಳು.
ಭಾನುವಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಾರ್ಗಿಲ್ ಕಾರ್ಖಾನೆ, ಭಾನುವಳ್ಳಿ,ಬೆಳ್ಳೂಡಿ, ಹನಗವಾಡಿ, ಬನ್ನಿಕೋಡು, ಕೆ.ಬೇವಿನಹಳ್ಳಿ,ಕಮಲಾಪುರ, ಹೊಳೆಸಿರಿಗೆರೆ, ಲಕ್ಕಶೆಟ್ಟಿಹಳ್ಳಿ ಹಾಗೂ ಸುತ್ತಲಿನ ಪ್ರದೇಶಗಳು.



