ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ 400/220 ಕೆವಿ ಹಿರೇಮಲ್ಲನಹೊಳೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 220ಕೆ.ವಿ ಸ್ವೀಕರಣಾ ಕೇಂದ್ರ ಚಿತ್ರದುರ್ಗದವರೆಗೆ 220 ಕೆ.ವಿ 36.645 ಕಿ.ಮೀಗಳಷ್ಟು ಉದ್ದದ 220 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗವನ್ನು ಮಾರ್ಚ್ 08 ರಂದು ಅಥವಾ ತದನಂತರ ಪರೀಕ್ಷಾರ್ಥವಾಗಿ ಚಾಲನೆ ನೀಡಲಾಗುತ್ತಿದೆ.
ಈ 220 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದರೆಂಬೆ, ಲೋಹದ ತಂತಿಗಳನ್ನು ಮತ್ತು ಇತರೆ ಯಾವುದೇ ವಸ್ತುಗಳನ್ನು ವಿದ್ಯುತ್ ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ಈ ಎಚ್ಚರಿಕೆಗಳನ್ನು ಉಲ್ಲಂಘಿಸಿದ್ದಲ್ಲಿ ಈ ವಿದ್ಯುತ್ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಜವಾಬ್ದಾರಿಯಾಗಿರುವುದಿಲ್ಲ.
ವಿದ್ಯುತ್ ಮಾರ್ಗ ಹಾದುಗೋಗುವ ಪ್ರದೇಶಗಳು: ದಾವಣಗೆರೆ ಜಿಲ್ಲೆ ಜಗಳುರು ತಾಲ್ಲೂಕಿನ ದೊಣ್ಣೆಹಳ್ಳಿ, ಮೂಡಲಮಾಚಿಕೆರೆ, ಸಿದ್ದಿಹಳ್ಳಿ, ಮುಸ್ಟೂರು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ, ತುರುವನೂರು, ಕೂನಬೇವು, ಬೆಳಗಟ್ಟ, ಬಾಗೇನಾಳ್, ಕಲ್ಲೇನಹಳ್ಳಿ, ಗೋನೂರು ಮತ್ತು ಮದಕರಿಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಮಾರ್ಗ ಹಾದುಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.



