ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕೆ ಕ್ಯಾಂಪಸ್ ಆಯ್ಕೆಯಾಗಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್
ಇನ್ಫೋಸಿಸ್, ಟಿಸಿಎಸ್, ಆಕ್ಸೆಂಚರ್, ಕಾಗ್ನಿಜೆಂಟಲ್, ಪೆಂಟಗಾನ್ ಸ್ಪೇಸ್ ಸೇರಿ ಇತರೆ ಕಂಪನಿಗಳಿಗೆ ಆಯ್ಕೆ ಯಾಗಿದ್ದಾರೆ. ಬಿಐಇಟಿಯ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸಿ.ಆರ್. ನಿರ್ಮಲಾ ನೇತೃತ್ವದಲ್ಲಿ ಉದ್ಯೋಗಾರ್ಹತೆ ವೃದ್ಧಿಸಲು ನೀಡಲಾದ ತರಬೇತಿಯ ಫಲವಾಗಿ ಇಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸಾಯಿ ಪ್ರಥಮ್ ವಾರ್ಷಿಕ 27 ಲಕ್ಷದ ವೇತನ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಎಚ್.ಬಿ. ಅರವಿಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ: ಜಿಲ್ಲಾದ್ಯಂತ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ ಜಾರಿ ಕುರಿತು ತರಬೇತಿ
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ; ಇಂದಿನ ಬೆಲೆ ಎಷ್ಟು.?



