ದಾವಣಗೆರೆ: ದಾವಣಗೆರೆ- ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ವಾರ್ಷಿಕ ಮಹಾಸಭೆಯು ಕುಂದುವಾಡ ರಸ್ತೆಯ ಡಾ . ಶ್ಯಾಮಸುಂದರ ಶೆಟ್ಟಿ ಬಂಟರ ಭವನ ದಲ್ಲಿ ಸಂಘದ ಅಧ್ಯಕ್ಷ ಡಾ . ಎಂ . ಪ್ರಭಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿನಡೆಯಿತು.
ಸಂಘದ ಕಾರ್ಯದರ್ಸಿ ಉಮೇಶ ಶೆಟ್ಟಿ ಸ್ವಾಗತಿಸಿ ಸಭೆಯ ನಡವಳಿ ಓದಿ ಹೇಳಿದರು. ಈ ಸಂದರ್ಭದಲ್ಲಿ 2021-24ರ ಅವರಿಗೆ ಹಾಲಿ ಕಾರ್ಯಕಾರಿ ಸಮಿತಿ ಮುಂದುವರಿಸಲು ತೀರ್ಮಾನಿಸಲಾಯಿತು. ನಂತರ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ . ಡಾ . ಎಸ್ . ಚಂದ್ರಶೇಖರ ಶೆಟ್ಟಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ , ಗುರಿಯನ್ನು ಸಾಧಿಸುವ ಛಲವಿರಬೇಕು. ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬಂಟರ ಸಂಘ ಉತ್ತಮ ಸಾಧನೆ ಮಾಡಿದೆ ಎಂದು ಅಭಿನಂದಿಸಿದರು.
ರಾಜೇಂದ್ರ .ವಿ . ಶೆಟ್ಟಿ ಮಾತನಾಡಿ, ಬಂಟ ಸಮಾಜ ಸಾಹಸಿ ಮನೋಬಾವದವರು. ವಿಶ್ವದ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿರುವುದು ಹೆಮ್ಮೆ ತಂದಿದದೆ. ಅದೇ ರೀತಿ ದಾವಣಗೆರೆ ನಗರದಲ್ಲಿ ನೂರು ಕುಟುಂಬಗಳನ್ನು ಹೊಂದಿರುವ ಸಂಘ ಇಂತಹ ಸುಂದರ ಕಲ್ಯಾಣ ಮಂಟಪ ಕಟ್ಟಿರುವುದು ನಿಜಕ್ಕೂ ಸಾಧನೆ ಎಂದು ಎಲ್ಲರನ್ನು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೆಶಕ ದಿನೇಶ .ಕೆ . ಶೆಟ್ಟಿ, ನಿರ್ದೇಶಕ ಕೆ . ಮೋಹನಾದಾಸ ಶೆಟ್ಟಿ, ಸಂಘದ ಕಾರ್ಯದರ್ಶಿ ಸಿಎ . ಉಮೇಶ ಶೆಟ್ಟಿ ಉಪಸ್ಥಿತರಿದ್ದರು.